ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ನೇತೃತ್ವದಲ್ಲಿ 14ನೇ ವಾರ್ಡಿನ ಶೇಣಿಯಲ್ಲಿ ಬಾಲಸಭಾ ಸದಸ್ಸ್ ಕಾರ್ಯಕ್ರಮವು ಶ್ರೀಶಾರದಾಂಬ ಶಾಲೆಯಲ್ಲಿ ಜರಗಿತು.
ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಬಾಲಸಭಾ ವಾರ್ಡ್ ಸಮಿತಿ ಅಧ್ಯಕ್ಷೆ ಅಫ್ರಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಗ್ರಾ.ಪಂ.ಅಧ್ಯಕ್ಷೆ ಶಾರದ ವೈ,ಸಿಡಿಎಸ್ ಸದಸ್ಯೆ ಪುμÁ್ಪ, ಆಶಾ ಕಾರ್ಯಕರ್ತೆ ಸುನೀತಾ, ಕುಟುಂಬಶ್ರೀ ಮೆಂಟರ್ ಫಸರುನ್ನೀಸ ಶುಭಾಶಂಸನೆಗೈದರು. ಅನ್ವಿತಾ ಶೇಣಿ ಮತ್ತು ಶಹನಾ ಪ್ರಾರ್ಥನೆಗೈದರು. ಚಾರುಜಶ್ರೀ ಮಣಿಯಂಪಾರೆ ಸ್ವಾಗತಿಸಿ, ವಂದಿಸಿದರು. ಅನನ್ಯ ಶೇಣಿ ನಿರೂಪಿಸಿದರು.