ತಿರುವನಂತಪುರಂ: ನವರಾತ್ರಿ ಪೂಜೆಯ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಚೆನ್ನೈನಿಂದ ಕೊಟ್ಟಾಯಂಗೆ ಮತ್ತು ಮಂಗಳೂರಿನಿಂದ ಎರ್ನಾಕುಲಂಗೆ ವಿಶೇಷ ರೈಲನ್ನು ಪ್ರಕಟಿಸಿದೆ.
ಎರಡೂ ರೈಲುಗಳ ಬುಕ್ಕಿಂಗ್ ಆರಂಭವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲು 10 ಸಾಮಾನ್ಯ ಮತ್ತು 8 ಸ್ಲೀಪರ್ ಕೋಚ್‍ಗಳನ್ನು ಹೊಂದಿರುತ್ತದೆ.
ಚೆನ್ನೈನಿಂದ ಕೊಟ್ಟಾಯಂಗೆ (06195) ಅಕ್ಟೋಬರ್ 10 ಮತ್ತು 12 ರಂದು ಮತ್ತು ಕೊಟ್ಟಾಯಂನಿಂದ ಚೆನ್ನೈ (06196) 11 ಮತ್ತು 13 ರಂದು ಕಾರ್ಯನಿರ್ವಹಿಸಲಿದೆ. ಚೆನ್ನೈನಿಂದ ರಾತ್ರಿ 11.55ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.45ಕ್ಕೆ ಕೊಟ್ಟಾಯಂ ತಲುಪಲಿದೆ.
ಕೊಟ್ಟಾಯಂನಿಂದ ಸಂಜೆ 4.45ಕ್ಕೆ ಹೊರಟು ಮರುದಿನ ಬೆಳಗ್ಗೆ 8.20ಕ್ಕೆ ಚೆನ್ನೈಗೆ ತಲುಪಲಿದೆ. ಕೇರಳದಲ್ಲಿ ಇದು ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಳಂ ಟೌನ್ ಮತ್ತು ಕೊಟ್ಟಾಯಂನಲ್ಲಿ ನಿಲುಗಡೆಗಳನ್ನು ಹೊಂದಿದೆ.
06155 ಎರ್ನಾಕುಳಂ ಜಂಕ್ಷನ್ ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‍ಪ್ರೆಸ್ ಎರ್ನಾಕುಳಂನಿಂದ 10 ರಂದು ಮಧ್ಯಾಹ್ನ 12.30 ಕ್ಕೆ ಹೊರಟು ರಾತ್ರಿ 9 ಗಂಟೆಗೆ ಮಂಗಳೂರಿಗೆ ತಲುಪಲಿದೆ. 11ರಂದು ಮಂಗಳೂರಿನಿಂದ ಮಧ್ಯಾಹ್ನ 1.50ಕ್ಕೆ ಹೊರಟು ರಾತ್ರಿ 9.25ಕ್ಕೆ ಎರ್ನಾಕುಳಂ ತಲುಪಲಿದೆ. ಆಲುವಾ, ತ್ರಿಶೂರ್, ಶೋರ್ನೂರು, ತಿರೂರ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಕಾಸರಗೋಡು ಮತ್ತು ಮಂಗಳೂರು ಜಂಕ್ಷನ್‍ನಲ್ಲಿ ನಿಲುಗಡೆ ಇರಲಿದೆ.