HEALTH TIPS

ಕನ್ನಡದ ಮೊದಲ ರಾಷ್ಟ್ರಕವಿ ಸ್ಮಾರಕ ಗಿಳಿವಿಂಡು ಸಭಾಂಗಣ ಯವನಿಕಾದ ಅನಾಸ್ಥೆ, ಗೋವಿಂದ ಪೈಗಳಿಗೆ ಮಾಡುವ ಅವಮಾನ -ಬಿಜೆಪಿ

ಮಂಜೇಶ್ವರ : ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಪಕ್ಕದಲ್ಲಿ ಜನತೆಯ ತೆರಿಗೆ ಹಣದಲ್ಲಿ ನಿರ್ಮಿಸಿದ ಸಭಾಂಗಣ ನಿರ್ಮಾಣವಾಗಿ 10ವರ್ಷ ಸಂದರೂ ಸಭಾಂಗಣ ಕಾಮಗಾರಿ ಪೂರ್ಣಗೊಳ್ಳದೆ, ನಾಡಿಗೆ, ಸ್ಥಳೀಯ ಕನ್ನಡಿಗರಿಗೆ, ಕನ್ನಡ ಕಾರ್ಯಕ್ರಮಗಳಿಗೆ, ಭಾಷಾ ಸಂಗಮ ಭೂಮಿಯ ಭಾಷಾ ಚಟುವಟಿಕೆಗಳಿಗೆ ಅಲಭ್ಯವಾಗಿರುವುದು ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಗಳಿಗೆ ಸರ್ಕಾರ ಎಸಗಿರುವ ಘೋರ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ.ಖಂಡಿಸಿ, ಸರ್ಕಾರ ಹಾಗೂ ಅಕಾಡೆಮಿಯ ಕಾರ್ಯವೈಖರಿಯನ್ನು ತೆರೆದಿಟ್ಟರು.


ಗೋವಿಂದ ಪೈಗಳ ಸಾಧನೆಗೆ ಪ್ರತಿಬಿಂಬವಾಗಿ ನೂರಾರು ಕನ್ನಡ ಅಭಿಮಾನಿಗಳಿಗೆ, ಸ್ಥಳೀಯ ಕಲಾ -ಸಾಂಸ್ಕøತಿಕ ರಂಗಕ್ಕೆ ಬೆಳಕಾಗಬೇಕಿದ್ದ ಸುಸಜ್ಜಿತ ಸಭಾಂಗಣವಾಗಿ ಜಿಲ್ಲೆಗೆ ಮಾದರಿಯಾಗಬೇಕಾದ ಸಭಾಂಗಣದ ಅನಾಸ್ಥೆ ಕನ್ನಡಿಗರಿಗೆ ಮಾತ್ರವಲ್ಲ ಇದು ನೇರವಾಗಿ ಗೋವಿಂದ ಪೈ ಗಳಿಗೆ ಮಾಡುತ್ತಿರುವ ಅವಮಾನ ಎಂದು ಅವರು ಹೇಳಿದರು. ನಿರ್ಮಾಣ ಆರಂಭಗೊಂಡು 10 ವರ್ಷಕಳೆದರೂ ಸಭಾಂಗಣ ಪೂರ್ಣವಾಗಿಲ್ಲ. ಆದರೂ ಕಲಾ ಸಂಸ್ಕೃತಿಕ ಚಟುವಟಿಕೆಗಳಿಗೆ ಹಾಗೂ ಸ್ಥಳೀಯ ಜನತೆಗೆ ಉಪಯೋಗವಾಗುವಂತೆ ಮಾಡಬವುದಿತ್ತು. ಕೇರಳ ಸರ್ಕಾರ ಹಾಗೂ ಶಾಸಕರ ಇಚ್ಚಾ ಶಕ್ತಿಯ ಕೊರತೆ, ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿಯ ಗುರಿ ಇಲ್ಲದ ಯೋಜನೆ, ಅಕಾಡೆಮಿಯ ಬೇಜವಾಬ್ದಾರಿತನ ಸಭಾಂಗಣ ಇಂದಿನ ಪಾಲುಬಿಳುವ ಅವಸ್ಥೆಗೆ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಸಭಾಂಗಣ ಕಾಮಗಾರಿ ಕೂಡಲೇ ಪೂರ್ತಿಗೊಳಿಸಿ ಸುಸಜ್ಜಿತ ಸಭಾಂಗಣವನ್ನು ಕನ್ನಡ ಕಲಾ ಸಾಂಸ್ಕøತಿಕ ಚಟುವಟಿಕೆಗಳಿಗೆ ಮೀಸಲಿಡಬೇಕೆಂದು ಆದರ್ಶ ಬಿ ಎಂ ಅಗ್ರಹಿಸಿದ್ದಾರೆ. ಸರ್ಕಾರದ ಕನ್ನಡ ವಿರೋಧಿ ನೀತಿಯ ಭಾಗವೇ ಇದು ಎಂದು ಬಿಜೆಪಿ ಪ್ರಶ್ನೆಸಿದೆ.

ಬಿಜೆಪಿ ಮಂಡಲ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಲಾಯಿತು. ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಣಿಕಂಠ ರೈ, ಎ.ಕೆ.ಕಯ್ಯಾರ್, ಯಾದವ ಬಡಾಜೆ, ಸದಾಶಿವ ಚೇರಾಲ್, ಲೋಕೇಶ್ ನೋಂಡ, ಜಯಲಕ್ಷ್ಮಿ ಭಟ್, ಸುಬ್ರಮಣ್ಯ ಭಟ್, ಪದ್ಮನಾಭ ರೈ, ಹರಿಶ್ಚಂದ್ರ ಎಂ, ಜಗದೀಶ್ ಚೆಂಡೆಲ್, ಚಂದ್ರವತಿ ಶೆಟ್ಟಿ, ಮಂಜುನಾಥ್ ಬಾಯರು, ತುಳಸಿಕುಮಾರಿ ಹಾಗೂ ಜನಪ್ರತಿನಿಧಿನಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ. ಭಟ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries