ಕಾಸರಗೋಡು: ಆಲ್ ಕೇರಳ ಲೈಸೆನ್ಸ್‍ಡ್ ವಯರ್‍ಮೆನ್ಸ್ ಸುಪರ್‍ವೈಸರ್ಸ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಹಾಗು ಕಾಸರಗೋಡು ಅರಮನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಚೆರ್ಕಳ ಐಮಾಕ್ಸ್ ಸಭಾಂಗಣದಲ್ಲಿ ನಡೆಯಿತು.
ಕೆಎಲ್‍ಡಬ್ಲ್ಯುಎಸ್‍ಸಿಎ ರಾಜ್ಯ ಅಧ್ಯಕ್ಷ ಕೆ.ಮುಹಮ್ಮದ್ ರಫೀಕ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಎ.ಮುಹಮ್ಮದ್ ಕುಂಞÂ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಅರಮನ ಆಸ್ಪತ್ರೆಯ ಡಾ.ಅಬ್ದುಲ್ ಮನ್ಸೂರ್, ಡಾ.ಅಬುಬಕ್ಕರ್, ಅಸೋಸಿಯೇಶನ್ ನೇತಾರರಾದ ಸಿ.ಕೃಷ್ಣದಾಸ್. ಎಂ.ಎಂ.ಸುನಿಲ್ ಕುಮಾರ್, ಜಗನ್ ಮೋಹನನ್, ಕೆ.ಬಾಬುರಾಜ್, ಕೆ.ನಾರಾಯಣನ್ ಕುಟ್ಟಿ, ಟಿ.ಪಿ,ಸೋಮನ್, ಟಿ.ಎಂ.ಅನ್ವರ್, ಜಗನ್ನಾಥ ನಾಯಕ್, ಜಿಲ್ಲಾ ಯೂನಿಟ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಕುಟುಂಬ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ದಯಾನಂದ ಸ್ವಾಗತಿಸಿ, ವಿ.ವಿ.ವಿನೋದ್ ಕುಮಾರ್ ವಂದಿಸಿದರು.