ಪಾಲಕ್ಕಾಡ್: ರಾಜಕೀಯವೆಂದರೆ ಚುನಾವಣೆ ಗೆಲ್ಲಲು ಹಲವು ಅಡೆತಡೆಗಳನ್ನು ದಾಟುವ ಒಂದು ಸವಾಲು. ಇದೀಗ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊಸ ರಣತಂತ್ರ ರೂಪಿಸುತ್ತಿದೆ.
ಪ್ರತಿ ಮತವೂ ಪ್ರಮುಖವಾಗಿರುವ ಚುನಾವಣೆಯಲ್ಲಿ ಅನ್ವರ್ ಅವರ ಸಂಘಟನೆಯಾದ ಡಿಎಂಕೆಯ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮತ್ತು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಸೇರಿದಂತೆ ಮುಖಂಡರು ಅನ್ವರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ ತಿಳಿದುಬಂದಿದೆ.
ಅನ್ವರ್ ಅವರು ಪಾಲಕ್ಕಾಡ್ ಡಿಎಂಕೆ ಅಭ್ಯರ್ಥಿ ಮಿನ್ಹಾಜ್ ಅವರನ್ನು ಹಿಂಪಡೆಯಬೇಕು ಮತ್ತು ಬದಲಿಗೆ ಚೇಲಕ್ಕರದಲ್ಲಿ ಕಾಂಗ್ರೆಸ್ ತನ್ನ ಸಂಘಟನೆಯ ಅಭ್ಯರ್ಥಿ ಕಾಂಗ್ರೆಸ್ ಭಿನ್ನಮತೀಯ ಎನ್‍ಕೆ ಸುಧೀರ್ ಅವರನ್ನು ಬೆಂಬಲಿಸಬೇಕು ಎಂದು ಕಠಿಣ ಕ್ರಮವನ್ನು ಮುಂದಿಟ್ಟರು. ಸಮಾಲೋಚನೆ ಪ್ರಗತಿಯಲ್ಲಿದೆ ಎಂದು ಅನ್ವರ್ ಹೇಳಿದರು.
ಚೇಲಕ್ಕರದಲ್ಲಿ ರಮ್ಯಾ ಹರಿದಾಸ್ ರನ್ನು ಹಿಂಪಡೆಯಬೇಕು ಎಂಬ ಅನ್ವರ್ ಬೇಡಿಕೆ ಕಾಂಗ್ರೆಸ್ ನಿಂದ ಸಾಧ್ಯವಿಲ್ಲ ಎನ್ನುವುದು ಅನ್ವರ್ ಗೆ ಅರಿವಾಗಿತ್ತು. ಭವಿಷ್ಯದಲ್ಲಿ ಕಾಂಗ್ರೆಸ್ ಜೊತೆಗಿನ ಸಹಕಾರಕ್ಕಾಗಿ ತಮ್ಮ ಚೌಕಾಸಿಯ ಶಕ್ತಿಯನ್ನು ಪ್ರದರ್ಶಿಸುವುದು ಅನ್ವರ್ ಅವರ ಉದ್ದೇಶವಾಗಿದೆ ಎಂದು ನಂಬಲಾಗಿದೆ.
ಪಾಲಕ್ಕಾಡ್‍ನಲ್ಲಿ ಕಳೆದ ಬಾರಿ ಕಾಂಗ್ರೆಸ್‍ನ ಶಾಫಿ ಪರಂಬಿಲ್ ಅವರು ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್ ಇ ಶ್ರೀಧರನ್ ವಿರುದ್ಧ 4000 ಕ್ಕಿಂತ ಕಡಿಮೆ ಮತಗಳಿಂದ ಗೆದ್ದಿದ್ದರು. ಈ ಪರಿಸ್ಥಿತಿಯಲ್ಲಿ ಅನ್ವರ್ ಮುಸ್ಲಿಂ ಸಮುದಾಯದ ಮಿನ್ಹಾಜ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿರುವುದು ಕಾಂಗ್ರೆಸ್ ನಲ್ಲಿ ಮತ ವಿಭಜನೆಯಾಗುವ ಆತಂಕ ಮೂಡಿಸಿದೆ. ಇದೇ ಕಾರಣಕ್ಕೆ ಅನ್ವರ್ ಸಹಕಾರ ಕೋರಲು ಕಾಂಗ್ರೆಸ್ಸ್ ಮುಂದಾಗಬೇಕಾಯಿತು.