ತಿರುವನಂತಪುರಂ: ತಿರುವನಂತಪುರದಲ್ಲಿ ಮ್ಯೂರಿನ್ ಟೈಫಸ್ ರೋಗ ದೃಢಪಟ್ಟಿದೆ. ವಿದೇಶದಿಂದ ಬಂದಿದ್ದ 75 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯ ಸ್ಥಿತಿ ಸುಧಾರಿಸಿದೆ. ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಲ್ಲೂರು ಸಿಎಂಸಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
ಮಲೇರಿಯ ಜ್ವರವನ್ನು ಹೋಲುವ ಬ್ಯಾಕ್ಟೀರಿಯಾದ ಕಾಯಿಲೆಯು ಭಾರತದಲ್ಲಿ ಅಪರೂಪವಾಗಿ ವರದಿಯಾಗಿದೆ ಈ ರೋಗವು ನಿರ್ದಿಷ್ಟ ರೀತಿಯ ಸೊಳ್ಳೆಯಿಂದ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.