ಪತ್ತನಂತಿಟ್ಟ: ತುಲಾಮಾಸ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಗರ್ಭಗೃಹ ಬಾಗಿಲು ಇಂದು ತೆರೆಯಲಾಗುತ್ತದೆ. ಸಂಜೆ 5 ಗಂಟೆಗೆ ತಂತ್ರಿ ಕಂಠರಾರ್ ರಾಜೀವರ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್.ಮಹೇಶ ನಂಬೂದಿರಿ ಅವರು ಬಾಗಿಲು ತೆರೆದು ದೀಪ ಬೆಳಗಿಸುವರು. ಹದಿನೆಂಟನೇ ಮೆಟ್ಟಿಲಿನ ಕೆಳಭಾಗದಲ್ಲಿರುವ ಕುಂಡದಲ್ಲಿ ಅಗ್ನಿಸ್ಪರ್ಶಗೈದು, ಅಯ್ಯಪ್ಪ ಭಕ್ತರಿಗೆ ಮೆಟ್ಟಿಲುಗಳನ್ನು ಹತ್ತಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಇಂದು ವಿಶೇಷ ಪೂಜೆಗಳು ಇರುವುದಿಲ್ಲ.
ಶಬರಿಮಲೆ ಮತ್ತು ಮಾಳಿಗಪ್ಪುರಂನ ನೂತನ ಮುಖ್ಯಸ್ಥರ(ಅರ್ಚಕರ) ಆಯ್ಕೆಗೆ ನ.17ರಂದು(ನಾಳೆ) ಬೆಳಗ್ಗೆ ತಂತ್ರಿ ಮಾರ್ಗದರ್ಶನದಲ್ಲಿ ಚೀಟಿ ಎತ್ತುವ ಕಾರ್ಯ ನಡೆಯಲಿದೆ. ವೃಶ್ಚಿಕಪುಲರಿಯಲ್ಲಿ, ಹೊಸ ಮೇಲ್ಶಾಂತಿಗಳು ದೇವಾಲಯದ ಗರ್ಭಗೃಹ ತೆರೆಯುವರು. 21ರಂದು ತುಲಾಮಾಸ ಪೂಜೆಗಳು ಮುಗಿದು ಗರ್ಭಗೃಹ ಮುಚ್ಚಲಾಗುತ್ತದೆ. ನವೆಂಬರ್ 15 ರಂದು ಮಂಡಲ ಅವಧಿಯ ಪ್ರಾರಂಭದಲ್ಲಿ ಬಾಗಿಲು ಮತ್ತೆ ತೆರೆಯಲಾಗುತ್ತದೆ.