ಕುಂಬಳೆ::ಜೈ ತುಳುನಾಡ್ ಸಂಘಟನೆ ಕಾಸರಗೋಡು ಹಾಗೂ ಕಳತ್ತೂರು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯ ನೇತೃತ್ವದಲ್ಲಿ ಕೇರಳ ತುಳು ಅಕಾಡೆಮಿಯ ಸಹಯೋಗದೊಂದಿಗೆ ತುಳು ಲಿಪಿ ಬ್ರಹ್ಮ ಡಾ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಹುಟ್ಟುಹಬ್ಬ-ವಿಶ್ವ ತುಳುಲಿಪಿ ದಿನಾಚರಣೆ ಪುವೆಂಪು ನೆಂಪು ಕಾರ್ಯಕ್ರಮ ಗುರುವಾರ(ನಾಳೆ) ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಅಪರಾಹ್ನ 2 ರಿಂದ ನಡೆಯಲಿದೆ.
ಸಮಾರಂಭದಲ್ಲಿ ಜೈ ತುಳುನಾಡ್ ಸಂಘಟನೆಯ ಅಧ್ಕ್ಷೆ ಕುಶಾಲಾಕ್ಷಿ ವಿ.ಕುಲಾಲ್ ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಜಯಾನಂದ ಮಂಜೇಶ್ವರ ಉದ್ಘಾಟಿಸುವರು. ಇಚ್ಲಂಪಾಡಿ ಶಾಲಾ ವ್ಯವಸ್ಥಾಪಕ ಗಣೇಶ್ ರಾವ್, ಮುಖ್ಯೋಪಾಧ್ಯಾಯ ರಾಧಾಕೃಷ್ಣ ತುಂಗ, ಹಳೆ ವಿದಾರ್ಥಿ ಸಂಘದ ಅಧ್ಯಕ್ಷ ಎಚ್.ಶಿವರಾಮ ಭಟ್, ಜೈ ತುಳುನಾಡ್ ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಪೂಂಜ, ಕುಂಬಳೆ ಗ್ರಾ.ಪಂ.ಸದಸ್ಯೆ ಪುಷ್ಪಲತಾ ಪಿ.ಶೆಟ್ಟಿ ಕಾಜೂರು, ದಿ.ವೆಂಕಟರಾಜ ಪುಣಿಚಿತ್ತಾಯರ ಪುತ್ರ ವಿಜಯರಾಜ ಪುಣಿಚಿತ್ತಾಯ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಚೂರಿತ್ತಡ್ಕ, ಮಾತೃಸಂಘದ ಅಧ್ಯಕ್ಷೆ ಸುಧಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ನಡೆಯುವ ತುಳುಲಿಪಿ ಕಲಿಕಾ ಕಾರ್ಯಕ್ರಮಕ್ಕೆ ಜೈ ತುಳುನಾಡ್ ಕಾಸರಗೋಡಿನ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ಚಾಲನೆ ನೀಡುವರು.ಹರಿಕಾಂತ್ ಕಾಸರಗೋಡು, ಸುಧಾಕರ ಮಾಸ್ತರ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿರುವರು.