HEALTH TIPS

ಲೆಬನಾನ್‌ನ ಹಣಕಾಸು ಸಂಸ್ಥೆಗಳ ಮೇಲೆ ಇಸ್ರೇಲ್‌ ದಾಳಿ: ವ್ಯಾಪಕ ಹಾನಿ

          ಬೈರೂತ್‌ : ಇಸ್ರೇಲ್‌ ಪಡೆಗಳು ಭಾನುವಾರ ರಾತ್ರಿಯಿಡೀ ಲೆಬನಾನ್‌ನ ಹಣಕಾಸು ಸಂಸ್ಥೆ 'ಅಲ್‌-ಖರ್ದ್‌-ಅಲ್‌ ಹಸನ್‌'ನ ಶಾಖೆಗಳನ್ನು ಗುರಿಯಾಗಿರಿಸಿಕೊಂಡು ವೈಮಾನಿಕ ದಾಳಿ ನಡೆಸಿದವು. ಹಿಜ್ಬುಲ್ಲಾ ಸಂಘಟನೆಯು ಹೆಚ್ಚು ನೆಲೆ ಹೊಂದಿರುವ ಬೈರೂತ್‌ ಮಾತ್ರವಲ್ಲದೆ ಲೆಬನಾನ್‌ನ ದಕ್ಷಿಣ ಭಾಗ, ಬೆಕಾ ಪಟ್ಟಣದ ಮೇಲೂ ದಾಳಿ ನಡೆಸಿದೆ.

         ' ಸಾಮಾನ್ಯ ಜನರು ಉಳಿತಾಯ ಮಾಡಿದ ಹಣವನ್ನು ಹಿಜ್ಬುಲ್ಲಾ ಸಂಘಟನೆಯು ದಾಳಿಗೆ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ' ಎಂದು ಇಸ್ರೇಲ್ ಸೇನೆಯು ಸಮರ್ಥಿಸಿಕೊಂಡಿದೆ.

          ದಾಳಿಯಿಂದ 9 ಮಹಡಿಯ ಕಟ್ಟಡದಲ್ಲಿ ವ್ಯಾಪಕ ಹೊಗೆ ಆವರಿಸಿಕೊಂಡಿತ್ತು. ಸಾಕಷ್ಟು ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸೇರ್ಪಡೆಯಾಗಿದ್ದರಿಂದ ಬುಲ್ಡೋಜರ್‌ ಮೂಲಕ ತೆರವುಗೊಳಿಸಲಾಯಿತು. ದಾಳಿ ಕುರಿತು ಇಸ್ರೇಲ್‌ ಸೇನೆಯು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರಿಂದ ಸಾವು- ನೋವಿನ ಕುರಿತು ಯಾವುದೇ ವರದಿಯಾಗಿಲ್ಲ.

             1982ರಲ್ಲಿ ಸ್ಥಾಪನೆಯಾದ 'ಅಲ್‌-ಖರ್ದ್‌-ಅಲ್‌ ಹಸನ್‌' ಹಣಕಾಸು ಸಂಸ್ಥೆಯು ಲೆಬನಾನ್‌ನಲ್ಲಿ ಇಸ್ಲಾಮಿಕ್‌ ಪದ್ಧತಿಯಂತೆ ಕಾರ್ಯಾಚರಣೆ ನಡೆಸುತ್ತದೆ. ಈ ಸಂಸ್ಥೆಯು ಹಿಜ್ಬುಲ್ಲಾ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳಿಗೂ ಹಣಕಾಸು ನೆರವು ಒದಗಿಸುತ್ತಿದೆ ಎಂದು ಇಸ್ರೇಲ್‌ ಆರೋಪಿಸಿ, ದಾಳಿ ನಡೆಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries