ಕಾಸರಗೋಡು: ಕೆಲಸ ಕೊಡಿಸುವುದಾಗಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಕಾಸರಗೋಡು ಡಿವೈಎಫ್‍ಐ ಮಾಜಿ ಜಿಲ್ಲಾ ಸಮಿತಿ ಸದಸ್ಯೆ ಸಚಿತಾ ರೈ ವಿರುದ್ಧ ಮತ್ತಷ್ಟು ದೂರುಗಳು ಹೊರಬರುತ್ತಿವೆ.
ಕರ್ನಾಟಕದಲ್ಲಿ ಕೆಲಸ ಕೊಡಿಸುವುದಾಗಿ ಸಚಿತಾ ಹಣ ವಸೂಲಿ ಮಾಡಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಕೊಡಿಸುವುದಾಗಿ ಕಾಸರಗೋಡಿನ ಮಹಿಳೆಯೊಬ್ಬರು ದೂರು ನೀಡಿದಾಗ ಸಚಿತಾ ವಿರುದ್ಧದ ಇತರ ಪ್ರಕರಣಗಳು ಬೆಳಕಿಗೆ ಬಂದಿವೆ.
ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಬಾಡೂರು ಮೂಲದವರಿಂದ ಸಚಿತಾ 1 ಲಕ್ಷ ಸುಲಿಗೆ ಮಾಡಿರುವುದಾಗಿ ದೂರಲಾಗಿದೆ. ಕಡಂಬಾರ್ ಮೂಡಂಬೈಲು ನಲ್ಲಿ ವಾಸವಾಗಿರುವ ಮೋಕ್ಷಿತ್ ಶೆಟ್ಟಿ ಎಂಬುವವರಿಂದ ಇದೇ ಕೆಲಸ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡಿರುವುದಾಗಿಯೂ ದೂರಿದೆ. ಮಂಜೇಶ್ವರ ಮತ್ತು ಬದಿಯಡ್ಕ ಪೋಲೀಸ್ ಠಾಣೆಗಳಲ್ಲಿ ಹೊಸ ದೂರುಗಳು ದಾಖಲಾಗಿವೆ.
ದೇಲಂಪಾಡಿ ಮೂಲದ ಸಚಿತಾ ರೈ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಹಣ ವಸೂಲಿ ಮಾಡಿರುವುದು ಮೊದಲ ಪ್ರPರಣವಾಗಿತ್ತು. ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಹೇಳಿ 7,31,500 ರೂ.ಗಳನ್ನು ಸುಲಿಗೆ ಮಾಡಿರುವುದಾಗಿದೆ ಆ ಪ್ರಕರಣ. ದೂರಿನ ಪ್ರಕಾರ ಸಚಿತಾ ಅವರಿಗೆ ಜನವರಿಯಿಂದ ಜೂನ್ ವರೆಗೆ ಕಂತುಗಳಲ್ಲಿ ಹಣ ಪಾವತಿಸಲಾಗಿದೆ. ಇದೇ ವೇಳೆ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಸಚಿತಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.ಪ್ರಸ್ತುತ ಸಚಿತಾ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.