ಇರಾನ್ :ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಮಿತ್ರರಾಷ್ಟ್ರಗಳ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸುತ್ತಿರುವ ರೀತಿ ಇಸ್ಲಾಮಿಕ್ ದೇಶವನ್ನು (Islamic Country) ಸಂಪೂರ್ಣ ಬೆಚ್ಚಿ ಬೀಳಿಸಿದೆ.
ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಕಣಿಯ ವಿಚಾರಣೆ!
ಮಾಧ್ಯಮ ವರದಿಗಳ ಪ್ರಕಾರ, 67 ವರ್ಷದ ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಕಣಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಹಸನ್ ನಸ್ರಲ್ಲಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮೇಲ್ವಿಚಾರಣೆಯಲ್ಲಿ ಈ ತನಿಖೆಯನ್ನು ನಡೆಸಲಾಗುತ್ತಿದೆ. ಹಸನ್ ನಸ್ರಲ್ಲಾ ಸಾವಿನ ನಂತರ ಕಣಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಅವರ ತಂಡವೂ ವಿಚಾರಣೆ ನಡೆಸುತ್ತಿದೆ.
ಹಿಜ್ಬುಲ್ಲಾ ಮತ್ತು ಇಸ್ರೇಲಿ ದಾಳಿಗಳು:
ಸೆಪ್ಟೆಂಬರ್ 27 ರಂದು ಬೈರುತ್ನಲ್ಲಿ ವೈಮಾನಿಕ ದಾಳಿಯ ಮೂಲಕ ಇಸ್ರೇಲ್ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಕೊಂದಿತು. ಇದರ ನಂತರ, ಅಕ್ಟೋಬರ್ 4 ರಂದು, ಹಿಜ್ಬುಲ್ಲಾ ಅವರ ಉತ್ತರಾಧಿಕಾರಿ ಹಶೆಮ್ ಸೈಫುದ್ದೀನ್ ನನ್ನು ಇಸ್ರೇಲ್ ಸೇನೆ ಬಂಕರ್‌ನಲ್ಲಿ ಕ್ಷಿಪಣಿಯಿಂದ ಕೊಂದಿತು. ಈ ಘಟನೆಗಳು ಇರಾನ್ ಮತ್ತು ಹಿಜ್ಬೊಲ್ಲಾದ ಭದ್ರತಾ ವ್ಯವಸ್ಥೆ ಮತ್ತು ಈ ರಹಸ್ಯ ಸ್ಥಳಗಳ ಬಗ್ಗೆ ಇಸ್ರೇಲ್ ಹೇಗೆ ಮಾಹಿತಿಯನ್ನು ಪಡೆದುಕೊಂಡಿದೆ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಲೆಬನಾನ್‌ನಲ್ಲಿ ಕಣಿಯ ಪಾತ್ರ?
ಹಸನ್ ನಸ್ರಲ್ಲಾ ಮರಣದ ನಂತರ ಇಸ್ಮಾಯಿಲ್ ಕಣಿ ಮತ್ತು ಇತರ IRGC ಕಮಾಂಡರ್‌ಗಳು ಲೆಬನಾನ್ ತಲುಪಿದ್ದರು, ಆದರೆ ಸೈಫುದ್ದೀನ್ ಸಾವಿನ ನಂತರ ಎರಡು ದಿನಗಳವರೆಗೆ ಸಂಪರ್ಕಿಸಲಾಗಲಿಲ್ಲ. ಇದಾದ ನಂತರ ಕಣಿ ಕುರಿತ ಊಹಾಪೋಹಗಳು ತೀವ್ರಗೊಂಡಿವೆ. ಆದರೆ, ಕಣಿ ಆರೋಗ್ಯವಾಗಿದ್ದಾರೆ ಎಂದು ಐಆರ್‌ಜಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ಮಾಯಿಲ್ ಕಣಿ ತನ್ನ ನಿಯಮಿತ ಕರ್ತವ್ಯವನ್ನು ಮಾಡುತ್ತಿದ್ದು, ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಗೃಹಬಂಧನದಲ್ಲಿಡಲಾಗುವುದು ಎಂದು ತಿಳಿದು ಬಂದಿದೆ.