ಕುಂಬಳೆ: ಕುಂಬಳೆ ಪೆರುವಾಡ್ ಸಮುದ್ರದಲ್ಲಿ ಬಲೆಯೊಂದಿಗೆ ಮೀನು ಹಿಡಿಯಲು ತೆರಳಿದ್ದ ಯುವಕ ಅಲೆಗೆ ಸಿಲುಕಿ ನೀರಲ್ಲಿ ನಾಪತ್ತೆಯಾಗಿದ್ದಾನೆ. ಪೆರುವಾಡ್ ಕಡಪ್ಪುರ ಫಿಶರೀಸ್ ಕಾಲನಿ ನಿವಾಸಿ, ಫಾತಿಮಾ ಎಂಬವರ ಪುತ್ರ ಆರ್ಷದ್(19)ನೀರಲ್ಲಿ ನಾಪತ್ತೆಯದ ಯುವಕ. ಮಂಗಳವಾರ ಸಂಜೆ ಬಲೆಯೊಂದಿಗೆ ಮೀನುಹಿಡಿಯಲು ತೆರಳಿದ್ದ ಆರ್ಷದ್ ಬೃಹತ್ ಅಲೆಗೆ ಸಿಲುಕಿದ್ದರೆನ್ನಲಾಗಿದೆ. ಅಗ್ನಿಶಾಮಕದಳ, ಕರಾವಳಿ ಪೊಲೀಸ್, ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ಹುಡುಕಾಟದಲ್ಲಿ ನಿರತರಾಗಿದ್ದಾರೆ.