ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿ ಕಣ್ಣೂರು ಎಡಿಎಂ ಆಗಿದ್ದ ಕೆ.ನವೀನ್ ಬಾಬು ಅವರ ನಿಧಕ್ಕೆ ಕಲೆಕ್ಟ್ರೇಟ್ ಸ್ಟಾಫ್ ಕೌನ್ಸಿಲ್ ನೇತೃತ್ವದಲ್ಲಿ ಸಂತಾಪ ಸೂಚಿಸಲಾಯಿತು. ಜಿಲ್ಲಾಧಿಕಾರಿಗಳ ಕಾನರೆನ್ಸ್ ಹಾಲ್‍ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಇಂಬುಶೇಖರ್, ಎಡಿಎಂ ಪಿ.ಅಖಿಲ್, ಡೆಪ್ಯೂಟಿ ಕಲೆಕ್ಟರ್‍ಗಳಾದ ಆರ್.ಎಸ್.ಬಿಜುರಾಜ್, ಕೆ.ಅಜೇಶ್, ಹುಸೂರು ಶಿರಸ್ತೆದಾರ್ ಆರ್.ರಾಜೇಶ್, ಕಂದಾಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.