ಕಾಸರಗೋಡು: ಕಣ್ಣೂರು ಎಡಿಎಂ ನವೀನ್‍ಬಾಬು ನಿಗೂಢ ಸಾವಿನ ಹಿನ್ನೆಲೆಯಲ್ಲಿ ಕಣ್ಣೂರು ಜಿಪಂ ಅಧ್ಯಕ್ಷೆ ಪಿ. ಪಿ. ದಿವ್ಯಾ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಬೇಕೆಂದು ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘದ ಕಾಸರಗೋಡು ಜಿಲ್ಲಾ ಘಟಕ ಒತ್ತಾಯಿಸಿದೆ.
ನವೀನ್ ಬಾಬು ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಆಹ್ವಾನವಿಲ್ಲದಿದ್ದರೂ, ಅನಧಿಕೃತವಾಗಿ ಪಾಲ್ಗೊಂಡು, ಸಾರ್ವಜನಿಕವಾಗಿ ಅವರ ತೇಜೋವಧೆಗೈದಿರುವುದು ಅವರ ಆತ್ಮಹತ್ಯೆಗೆ ಕಾರಣವಾಗಿದೆ.
ಅಧಿಕಾರದ ದರ್ಪದಿಂದ ಆಮಂತ್ರಣವಿಲ್ಲದೇ ಸಭೆಗೆ ಹಾಜರಾಗಿ ಓರ್ವ ಉನ್ನತ ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕವಾಗಿ ನಿಂದಿಸಿ ತೇಜೋವದೆ ಮಾಡಿದ ರೀತಿ ನಿಜಕ್ಕೂ ಅಧಿಕಾರದ ದುರುಪಯೋಗವಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆ ಈ ರೀತಿಯ ರಾಜಕೀಯ ದಬ್ಬಾಳಿಕೆ ಕೊನೆಗೂಲಿಸಲೇಬೇಕು. ಇಂತಹ ಅನೀತಿಗೆದುರಾಗಿ ಸಮಾಜ ಒಗ್ಗಟ್ಟಾಗಿ ಹೋರಾಡಬೇಕೆಂದು ಸಂಘದ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಮಲ್ಲಿಗೆಮಾಡು ಹೇಳಿಕೆಯಲ್ಲಿ ತಿಳಿಸಿದ್ದಾರೆ.