ಕಾಸರಗೋಡು ಮಂಜೇಶ್ವರ ವಿಧಾನಸಭಾ ಚುನಾವಣಾ ತಕರಾರು ಸಂಬಂಧ ಎಡರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ವಿ ರಮೇಶನ್ ದೂರಿಗೆ ಸಂಬಂಧಿಸಿ ನ್ಯಾಯಾಲಯದ ತೀರ್ಪನ್ನು ಕೆಲವು ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಕೆ.ಶ್ರೀಕಾಂತ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಮಬಂಧಿಸಿ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಕೆಲವೊಂದು ಮಾಧ್ಯಮಗಳು ಸುದ್ದಿಂಯನ್ನು ತಿರುಚಿದೆ.
ಪ್ರಕರಣದ ಎರಡನೇ ಸಾಕ್ಷಿ ಸುಂದರ ಬಂಧನದಲ್ಲಿದ್ದ ಸಂದರ್ಭ ಬೆದರಿಕೆ ಮತ್ತು ಲಂಚದ ಆಮಿಷವೊಡ್ಡಿ ಸುಂದರ ಅವರ ನಾಮಪತ್ರ ಹಿಂಪಡೆಯಲಾಗಿದೆ ಎಂಬ ಹೇಳಿಕೆ ವಿಸ್ವಾಸನೀಯವಲ್ಲ ಎಂಬುದಾಘಿ ಈ ತೀರ್ಪಿನ ಮೂಲಕ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಈ ವಿಷಯವನ್ನು ಹಲವು ಮಾಧ್ಯಮಗಳು ಮುಚ್ಚಿಹಾಕಿವೆ. ಪೆÇಲೀಸರು ಚಾರ್ಜ್ ಶೀಟ್ ಸಲ್ಲಿಸಲು ತಡಮಾಡಿದ ಕಾರಣ ಪ್ರಕರಣ ಸುರೇಂದ್ರನ್ ಪರವಾಗಿ ತೀರ್ಪು ನಿರ್ಧಾರವಾಯಿತು ಎಂಬುದು ಕೆಲವು ಮಾಧ್ಯಮಗಳು ಪ್ರಚಾರ ನಡೆಸಿರುವುದಾಗಿ ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.