ಉಪ್ಪಳ: ಕುಟುಂಬಶ್ರೀ ಜಿಲ್ಲಾ ಮಿಷನ್ ಅಡಿಯಲ್ಲಿ ಬಾಲ ಸದಸ್ ವತಿಯಿಂದ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಧಿವೇಶನ ಗಾಂಧಿ ಜಯಂತಿಯಂದು ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ 3 ಮತ್ತು 4ನೇ ವಾರ್ಡ್ ನ ಸಿಡಿಎಸ್ ಕಾರ್ಯಕರ್ತರು ಸಬೆಯನ್ನು ಆಯೋಜಿಸಿದ್ದರು.
ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಕಾರ್ಯಕ್ರಮ ಉದ್ಘಾಟಿಸಿದರು. ಗಾಂಧಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದಿನದ ಮಹತ್ವ ಮತ್ತು ಗಾಂಧಿ ಸಂದೇಶ ತಿಳಿಸಿದರು.
ಈ ಸಂದರ್ಭ ಪರಿಸರವನ್ನು ಶುಚೀಕರಣ ಸೇವೆ ನಡೆಯಿತು. ಬಾಲಸಭಾದ ಭಾಗವಾಗಿ ಮಕ್ಕಳಿಗೆ ಕಲಾತ್ಮಕ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಕುರಿತಾದ ಕವನಗಳು ಮತ್ತು ಗೀತೆಗಳನ್ನು ಹಾಡಲಾಯಿತು. ಸಿ.ಡಿ.ಎಸ್ ಉಪಾಧ್ಯಕ್ಷೆ ನಸೀಮಾ, ಸಿಡಿಎಸ್ ಸದಸ್ಯೆ ಸಫೀನಾ, ಸಂಪನ್ಮೂಲ ವ್ಯಕ್ತಿ ಸನಾಬಾನು ತರಗತಿ ನಡೆಸಿದರು.
ಶಿಕ್ಷಕಿಯರಾದ ಧನ್ಯ, ಕಾವ್ಯ, ಶಾರಿ, ಅನಿತಾ ಭಾಗವಹಿಸಿದ್ದರು. ಶಿಕ್ಷಕ ಬಶೀರ್ ಸ್ವಾಗತಿಸಿ, ರಿಯಾಝ್ ವಂದಿಸಿದರು.