ನವದೆಹಲಿ: ಸಿಬಿಐ, ಪೊಲೀಸ್, ಕಸ್ಟಮ್ಸ್ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯ ಭಾಗವಾಗಿ ವಿಡಿಯೊ ಕರೆ ಮೂಲಕ 'ಡಿಜಿಟಲ್ ಅರೆಸ್ಟ್' ಮಾಡುವುದಿಲ್ಲ ಎಂದು ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರ (ಐ4ಸಿ) ಸ್ಪಷ್ಟನೆ ನೀಡಿದೆ.
ನವದೆಹಲಿ: ಸಿಬಿಐ, ಪೊಲೀಸ್, ಕಸ್ಟಮ್ಸ್ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯ ಭಾಗವಾಗಿ ವಿಡಿಯೊ ಕರೆ ಮೂಲಕ 'ಡಿಜಿಟಲ್ ಅರೆಸ್ಟ್' ಮಾಡುವುದಿಲ್ಲ ಎಂದು ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರ (ಐ4ಸಿ) ಸ್ಪಷ್ಟನೆ ನೀಡಿದೆ.
'ಡಿಜಿಟಲ್ ಅರೆಸ್ಟ್' ಅಪರಾಧ ಕೃತ್ಯಗಳು ಗಣನೀಯವಾಗಿ ಏರುತ್ತಿರುವುದರಿಂದ ಈ ಸ್ಪಷ್ಟನೆ ನೀಡಿದೆ.
'ಆತಂಕಗೊಳ್ಳಬೇಡಿ, ಜಾಗ್ರತೆಯಿಂದಿರಿ. ವಿಡಿಯೊ ಕರೆ ಮಾಡುವ ಮೂಲಕ ಸಿಬಿಐ, ಪೊಲೀಸ್, ಕಸ್ಟಮ್ಸ್ ಮತ್ತು ಇ.ಡಿ ಅಧಿಕಾರಿಗಳು ಎಂದಿಗೂ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ' ಎಂದು ಈ ಕುರಿತು ಹೇಳಿಕೆ ನೀಡಿದೆ.
ಇಂತಹ ವಂಚನೆ ಯತ್ನ ಪ್ರಕರಣಗಳಲ್ಲಿ ಐ4ಸಿಗೆ ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ ಸಂಸ್ಥೆಯ ವೆಬ್‌ಸೈಟ್ (www.cybercrime.gov.in) ಸಂಪರ್ಕಿಸುವ ಮೂಲಕ ಮಾಹಿತಿ ನೀಡಬೇಕು ಎಂದು ಕೋರಿದೆ.