ಕಲ್ಪಟ್ಟ: ವಯನಾಡಿನ ಎನ್‍ಡಿಎ ಅಭ್ಯರ್ಥಿ ನವ್ಯಾ ಹರಿದಾಸ್ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಮೇಘಶ್ರೀ ಅವರ ಮುಂದೆ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್, ಜಿಲ್ಲಾಧ್ಯಕ್ಷ ಪ್ರಶಾಂತ್ ಮಳವ್ಯಾಲ್, ರಾಜ್ಯ ಸಮಿತಿ ಸದಸ್ಯ ಸಾಜಿ ಶಂಕರ್, ಪಿ.ಸದಾನಂದನ್, ಕೆ.ಪಿ.ಮಧು, ಬಿಡಿಜೆಎಸ್ ಜಿಲ್ಲಾಧ್ಯಕ್ಷ ಮೋಹನನ್ ಮತ್ತಿತರರು ಅಭ್ಯರ್ಥಿಯ ಜೊತೆ ಇರಲಿದ್ದಾರೆ.
ಐದು ವರ್ಷಗಳ ಕಾಲ ಸಂಸದರಾಗಿ ಕುಳಿತ ರಾಹುಲ್ ಗಾಂಧಿ ವಯನಾಡಿನ ಅಭಿವೃದ್ಧಿಗೆ ಏನೂ ಮಾಡಿಲ್ಲ ಎಂದು ನವ್ಯ ಆರೋಪಿಸಿರುವರು. ರಾಹುಲ್ ಮತ್ತು ಪ್ರಿಯಾಂಕಾ ವಯನಾಡ್ ನೋಡಲು ಬಂದಿರುವ ಪ್ರವಾಸಿಗರು ಎಂದು ನವ್ಯಾ ಹೇಳಿದ್ದಾರೆ. ಭೂಕುಸಿತ ಸಂಭವಿಸಿದ ವಯನಾಡಿನ ಜನರೊಂದಿಗೆ ಬೆಂಬಲವಾಗಿರಲು ಸಂಸದರ ಅಗತ್ಯವಿದೆ ಎಂದು ನವ್ಯಾ ಗಮನ ಸೆಳೆದರು.
ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಚೇಲಕ್ಕರದಲ್ಲಿ ಎನ್‍ಡಿಎ ಅಭ್ಯರ್ಥಿ ಕೆ.ಬಾಲಕೃಷ್ಣನ್, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಹರಿದಾಸ್ ಮತ್ತು ಎಡಪಕ್ಷಗಳ ಅಭ್ಯರ್ಥಿ ಯು.ಆರ್.ಪ್ರದೀಪ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಪಾಲಕ್ಕಾಡ್ ಎನ್‍ಡಿಎ ಅಭ್ಯರ್ಥಿ ಸಿ ಕೃಷ್ಣಕುಮಾರ್ ಕೂಡ ತಮ್ಮ ಪತ್ರ ಸಲ್ಲಿಸಿದ್ದಾರೆ.