ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಪರಪ್ಪ ಶಾಖೆಯ ಸಕ್ರಿಯ ಸದಸ್ಯ ಥೋಮಸ್ ಪಿ.ಎ. ಇವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ. ಐವತ್ತು ಸಾವಿರವನ್ನು ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣನ್ ಕೆ, ಇವರು ಅವರ ನಿವಾಸಕ್ಕೆ ತೆರಳಿ ಹಸ್ತಾಂತರಿಸಿದರು. ಈ ಸಂದಭರ್Àದಲ್ಲಿ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಎಂ., ಪರಪ್ಪ ಶಾಖೆಯ ಪ್ರಬಂಧಕ ಅರುಣ್ ಕುಮಾರ್ ಸಿ. ಎಚ್. ಮತ್ತು ಸದಸ್ಯ ಜಯನ್ ಕೆ. ಉಪಸ್ಥಿತರಿದ್ದರು.