HEALTH TIPS

ಲೆಬನಾನ್‌ನ ಐತೊ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್‌ಗೆ ಹಿಜ್ಬುಲ್ಲಾ ಎಚ್ಚರಿಕೆ

 ತೊ: ಉತ್ತರ ಲೆಬನಾನ್‌ನ ಐತೊ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ. ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತೇವೆ ಎಂದು ಹಿಜ್ಬುಲ್ಲಾದ ಹಂಗಾಮಿ ನಾಯಕ ನೈಮ್ ಕಾಸಿಮ್ ಹೇಳಿದ್ದಾನೆ.

'ಶತ್ರುಗಳಿಗೆ ಹಾನಿಯುಂಟು ಮಾಡುತ್ತೇವೆ' ಎಂದು ಹೇಳಿದ್ದಾನೆ.

ಅಲ್ಲದೆ ಇಸ್ರೇಲ್‌ನ ಟೆಲ್ ಅವಿವ್‌ ಹಾಗೂ ಹೈಫಾ ನಗರಗಳ ಹೆಸರನ್ನೂ ಉಲ್ಲೇಖ ಮಾಡಿದ್ದಾನೆ.

ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಬೆಂಬಲಿಸಲು ಅಮೆರಿಕ ಸಣ್ಣ ತುಕಡಿ ಕಳಿಸಿದ ದಿನದಂದು ಚಿತ್ರಿಕರಿಸಲಾದ ವಿಡಿಯೊ ಸಂದೇಶದಲ್ಲಿ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾನೆ.

'ನಮಗೆ ಪ್ಯಾಲೆಸ್ಟೀನ್‌, ಲೆಬನಾನ್ ಒಂದೇ. ಪ್ಯಾಲೆಸ್ಟೀನ್ ಅನ್ನು ಜಗತ್ತಿನಿಂದ ಪ್ರತ್ಯೇಕವಾಗಿಸಲು ನಾವು ಬಿಡುವುದಿಲ್ಲ' ಎಂದು ಕಾಸಿಂ ಹೇಳಿದ್ದಾನೆ. ಅಲ್ಲದೆ ಗಾಜಾದಲ್ಲಿ ಕದನ ವಿರಾಮ ಘೋಷಿಸುವವೆರಗೂ ಇಸ್ರೇಲ್‌ ಮೇಲೆ ದಾಳಿಗಳು ನಡೆಯುತ್ತಿರುತ್ತವೆ ಎಂದು ಎಚ್ಚರಿಕೆ ನೀಡಿದ್ದಾನೆ.

ಕಳೆದೊಂದು ವರ್ಷದಲ್ಲಿ ಪ್ಯಾಲೆಸ್ಟೀನ್‌ಗೆ ಬೆಂಬಲವಾಗಿ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ಸುಮಾರು 13 ಸಾವಿರ ರಾಕೆಟ್‌ ದಾಳಿ ನಡೆಸಿದ್ದಾರೆ. ಪರಿಣಾಮ ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಲವು ಮಂದಿ ನಿರಾಶ್ರಿತರಾಗಿದ್ದಾರೆ.

'ಹಿಜ್ಬುಲ್ಲಾ ಜೊತೆ ಯುದ್ಧ ಸಾರಲಾಗಿದ್ದು, ಅವರ ರಾಕೆಟ್ ದಾಳಿಯನ್ನು ತಡೆದು, ನಿರಾಶ್ರಿತರು ಮತ್ತೆ ಮನೆ ಸೇರುವಂತೆ ಮಾಡುವುದು ನಮ್ಮ ಗುರಿಯಾಗಿದೆ' ಎಂದು ಇಸ್ರೇಲ್ ಈ ಹಿಂದೆಯೇ ಹೇಳಿದೆ.

ಸೋಮವಾರ ಉತ್ತರ ಲೆಬನಾನ್‌ನ ಐತೊದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಪರಿಣಾಮ ಕನಿಷ್ಠ 22 ಮಂದಿ ಸಾವಿಗೀಡಾಗಿದ್ದರು. 'ಹಿಜ್ಬುಲ್ಲಾಗೆ ಸೇರಿದ ತಾಣದ ಮೇಲೆ ದಾಳಿ ನಡೆಸಲಾಗಿದೆ' ಎಂದು ಇಸ್ರೇಲ್ ಹೇಳಿಕೊಂಡಿತ್ತು. ಆದರೆ ಈ ದಾಳಿಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.

'ಯುದ್ಧ ನಿಮಯಗಳನ್ನು ಗೌರವಿಸುವುದರ ಬಗ್ಗೆ ನಮಗೆ ಆತಂಕಗಳಿವೆ' ಎಂದು ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವಕ್ತಾರ ಜೆರೆಮಿ ಲಾರೆನ್ಸ್ ಹೇಳಿದ್ದಾರೆ. ಐತೊದಲ್ಲಿ ಇಸ್ರೇಲ್ ದಾಳಿಯಿಂದಾಗಿ 12ಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳು ಸಾವಿಗೀಡಾಗಿದ್ದಾರೆ ಎನ್ನುವ ವಿಶ್ವಾಸಾರ್ಹ ಮಾಹಿತಿ ವಿಶ್ವಸಂಸ್ಥೆಗೆ ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಕ್ರಿಶ್ಚಿಯನ್ ಬಾಹುಳ್ಯದ, ಹಿಜ್ಬುಲ್ಲಾ ಪ್ರದೇಶದಿಂದ ಬಹುದೂರ ಇರುವ ಐತೊ ಮೇಲೆ ದಾಳಿ ನಡೆದಿದ್ದು, ಸ್ಥಳೀಯರಿಗೆ ಆಘಾತವನ್ನುಂಟು ಮಾಡಿದೆ. ಲೆಬನಾನ್‌ನಲ್ಲಿ ಇಸ್ರೇಲ್‌ ಆಕ್ರಮಣ ಮತ್ತಷ್ಟು ಹೆಚ್ಚಳವಾಗುವ ಭೀತಿ ಎದುರಾಗಿದೆ.

ಸಣ್ಣ ಗ್ರಾಮವಾಗಿರುವ ಐತೊದಲ್ಲಿ ದಾಳಿಯಿಂದ ಸೃಷ್ಠಿಯಾಗಿರುವ ಅವಶೇಷಗಳಡಿ ರಕ್ಷಣಾ ಕಾರ್ಯಕರ್ತರು ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

'ದಾಳಿಯಿಂದಾಗಿ ದೊಡ್ಡ ಶಬ್ದವೊಂದು ಕೇಳಿತು. ನಾವು ಹೊರಗೆ ಓಡಿ ಬಂದೆವು. ಇಡೀ ಪ್ರದೇಶವನ್ನು ದೂಳು, ಹೊಗೆ, ಅವಶೇಷಗಳು ಆವರಿಸಿಕೊಂಡಿದ್ದವು. ಶವಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು' ಎಂದು ದಾಳಿಯ ಭೀಕರತೆಯನ್ನು ಸ್ಥಳೀಯ ನಿವಾಸಿ ಡ್ಯಾನಿ ಅಲ್ವನ್ ಬಿಚ್ಚಿಟ್ಟಿದ್ದಾರೆ.

ಕಟ್ಟಡದ ಅವೇಶಷಗಳಡಿ ಮಗುವೊಂದರ ಮೃತದೇಹ ಪತ್ತೆಯಾಗಿದೆ. ಬಳಿಕ ಮತ್ತೊಂದು ಸಣ್ಣ ಮಗುವಿನ ಕಾಲು ಲಭಿಸಿದೆ. ಇವೆರಡನ್ನು ಲೆಬನಾನ್‌ ಪಡೆಗಳು ಬಿಳಿ ಚೀಲದಲ್ಲಿ ತುಂಬಿಸಿಕೊಂಡರು ಎಂದು 'ಎಪಿ' ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಥಳದಲ್ಲಿ ಬುಲ್ಡೋಜರ್‌ಗಳು ಕೆಲಸ ಮಾಡುತ್ತಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries