ತಿರುವನಂತಪುರಂ: ವಿಝಿಂಜಂ ಬಂದರಿಗೆ ಬಂಡೆಗಳನ್ನು ಸಾಗಿಸುತ್ತಿದ್ದ ಬಾರ್ಜ್ ಮುದಲಪೆÇ್ಪೀಜಿ ಎಂಬಲ್ಲಿನ ಅಣೆಕಟ್ಟಿಗೆ ಅಪ್ಪಳಿಸಿದ ಘಟನೆ ನಡೆದಿದೆ. ತೀವ್ರ ಹೆದ್ದೆರೆಗಳಿಂದ ಈ ಅವಘಡ ಸಂಭವಿಸಿದೆ. ಸದ್ಯ ಇಲ್ಲಿ ಬಾರ್ಜ್ ಸಿಲುಕಿಕೊಂಡಿದೆ.
ವಿಝಿಂಜಂ ಬಂದರಿನ ನಿರ್ಮಾಣಕ್ಕೆ ಬಳಸಲಾದ ಬಂಡೆಯನ್ನು ಮುದಲಪೆÇೀಜ್ ಕಾಲುವೆಯ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಇದು ಕೆಳಭಾಗದಲ್ಲಿ ಮಣ್ಣು ಮತ್ತು ಕಲ್ಲು ಸಂಗ್ರಹವಾಗಿರುವ ಸ್ಥಳವಾಗಿದೆ ಮತ್ತು ಆಳ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ನಿರೀಕ್ಷೆಗೂ ಮೀರಿದ ಪ್ರಬಲ ಅಲೆಗಳಿಂದ ಬಾರ್ಜ್ ನಿಯಂತ್ರಣ ಕಳೆದುಕೊಂಡಿದೆ. ಅಲೆಗಳ ರಭಸಕ್ಕೆ ಅದು ದಂಡೆಗೆ ಅಪ್ಪಳಿಸುತ್ತಿತ್ತು.
ಮಳೆಯ ಮುನ್ನೆಚ್ಚರಿಕೆಗಳನ್ನು ನೀಡಲಾಗಿದ್ದರೂ, ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ತೆರೆಯ ಕಾರಣ ಅವಘಡ ಉಂಟಾಯಿತು.
ಬೆಳಗ್ಗೆ ಅಪಘಾತ ಸಂಭವಿಸಿದೆ. ಬಾರ್ಜ್‍ನಲ್ಲಿ ಐದು ಜನರಿದ್ದರು. ಇವರು ರಾಜ್ಯೇತರ ಕಾರ್ಮಿಕರು. ಯಾರಿಗೂ ಗಾಯವಾಗಿಲ್ಲ. ಬಾರ್ಜ್ ಹೊರತೆಗೆಯುವ ಪ್ರಯತ್ನ ಪ್ರಗತಿಯಲ್ಲಿದೆ.
ಕುಟಪೆÇ್ಪೀಜಿನಲ್ಲಿ ಮೀನುಗಾರರ ದೋಣಿಗಳಿಗೆ ತೊಂದರೆಯಾಗುವುದು ಸಾಮಾನ್ಯ. ಆದರೆ ಬಾರ್ಜ್ ಅಪಘಾತಕ್ಕೀಡಾಗಿರುವುದು ಇದೇ ಮೊದಲು. ಒಡ್ಡು ನಿರ್ಮಾಣದ ಅವೈಜ್ಞಾನಿಕತೆ ಸೇರಿದಂತೆ ಸ್ಥಳೀಯರು ಆಗಾಗ್ಗೆ ಇಲ್ಲಿ ಪ್ರಶ್ನಿಸಿದ್ದಾರೆ.