ತೈಪೆ: ಚೀನಾ ಹಾಗೂ ತೈವಾನ್ ನಡುವಿನ ತೈವಾನ್ ಜಲಸಂಧಿ ಪ್ರದೇಶದಲ್ಲಿ ಸೋಮವಾರ ಚೀನಾ ಅತಿ ದೊಡ್ಡ ಸಮರಾಭ್ಯಾಸ ನಡೆಸಿತು.'ತೈವಾನ್‌ನ 'ಪ್ರತ್ಯೇಕತಾವಾದ'ಕ್ಕೆ ತೀವ್ರ ಎಚ್ಚರಿಕೆ ನೀಡುವ ಉದ್ದೇಶದಿಂದ ಸಮರಾಭ್ಯಾಸ ನಡೆಸಲಾಯಿತು' ಎಂದು ಚೀನಾ ಹೇಳಿದೆ.
ತೈಪೆ: ಚೀನಾ ಹಾಗೂ ತೈವಾನ್ ನಡುವಿನ ತೈವಾನ್ ಜಲಸಂಧಿ ಪ್ರದೇಶದಲ್ಲಿ ಸೋಮವಾರ ಚೀನಾ ಅತಿ ದೊಡ್ಡ ಸಮರಾಭ್ಯಾಸ ನಡೆಸಿತು.'ತೈವಾನ್‌ನ 'ಪ್ರತ್ಯೇಕತಾವಾದ'ಕ್ಕೆ ತೀವ್ರ ಎಚ್ಚರಿಕೆ ನೀಡುವ ಉದ್ದೇಶದಿಂದ ಸಮರಾಭ್ಯಾಸ ನಡೆಸಲಾಯಿತು' ಎಂದು ಚೀನಾ ಹೇಳಿದೆ.
ಯುದ್ಧವಿಮಾನ ವಾಹಕ ನೌಕೆ, ಯುದ್ಧ ವಿಮಾನಗಳ ಮೂಲಕ ಚೀನಾವು ತೈವಾನ್ ಅನ್ನು ಸುತ್ತುವರಿದಿತ್ತು. ಈ ಮೂಲಕ ತೈವಾನ್‌ನ ಮುಖ್ಯ ಬಂದರುಗಳನ್ನು ಚೀನಾ ಮುಚ್ಚಿತ್ತು.
'ತೈವಾನ್, ಚೀನಾದ ಭಾಗ ಎಂದು ಒಪ್ಪಿಕೊಳ್ಳಲು ಆ ದೇಶದ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ನಿಕಾರಿಸಿದ್ದಾರೆ. ಆದ್ದರಿಂದಲೇ ನಾವು ಸಮರಾಭ್ಯಾಸ ನಡೆಸುತ್ತಿದ್ದೇವೆ' ಎಂದು ಚೀನಾದ ರಕ್ಷಣಾ ಸಚಿವಾಲಯ ಈ ಮೊದಲು ಹೇಳಿತ್ತು.
'ತೈವಾನ್ ಅನ್ನು ಪ್ರತಿನಿಧಿಸುವ ಹಕ್ಕು ಚೀನಾಗೆ ಇಲ್ಲ. ನಮ್ಮ ದೇಶವನ್ನು ಕಬಳಿಸುವುದನ್ನು ಅಥವಾ ತಮ್ಮ ದೇಶಕ್ಕೆ ನಮ್ಮನ್ನು ಸೇರಿಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆ' ಎಂದು ನಾಲ್ಕು ದಿನಗಳ ಹಿಂದಷ್ಟೆ ಲಾಯ್ ಚಿಂಗ್-ಟೆ ಹೇಳಿದ್ದರು.
ಚೀನಾದ ಸಮರಾಭ್ಯಾದ ಕುರಿತು ಪ್ರತಿಕ್ರಿಯಿಸಿದ್ದ ತೈವಾನ್‌ನ ಭಧ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜೋಸೆಫ್ ವು, 'ಚೀನಾ ಬೆದರಿಕೆಗೆ ನಮ್ಮ ಸೇನೆಯು ತಕ್ಕ ಉತ್ತರ ನೀಡಲಿದೆ' ಎಂದಿದ್ದರು. 'ಇದೊಂದು ಅನಗತ್ಯ ಹಾಗೂ ಭಯದ ವಾತಾವರಣವನ್ನು ಹರಡುವ ಪ್ರಕ್ರಿಯೆ' ಎಂದು ಅಮೆರಿಕವು ಚೀನಾದ ಸಮರಾಭ್ಯಾಸದ ಕುರಿತು ಪ್ರಕ್ರಿಯಿಸಿತ್ತು.
125 ಯುದ್ಧವಿಮಾನ, 7 ಯುದ್ಧನೌಕೆ, 4 ಹಡಗುಗಳ ಮೂಲಕ ಚೀನಾ ಸಮರಾಭ್ಯಾಸ ನಡೆಸಿತ್ತು ಎಂದು ತೈವಾನ್ ಹೇಳಿದೆ.