ಕೊಟ್ಟಾಯಂ: ಉಪಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಲ್ವರ್ ಲೈನ್ ರೈಲು ಯೋಜನೆಗೆ ಮರು ಚಾಲನೆ ನೀಡಿರುವುದು ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ. ಪುತ್ತುಪಲ್ಲಿ ಉಪಚುನಾವಣೆ ಮೇಲೆ ಪರಿಣಾಮದ ಭೀತಿ ಪಕ್ಷದ್ದಾಗಿದೆ.
ಸಿಲ್ವರ್ ಲೈನ್ ವಿರೋಧಿ ಮುಷ್ಕರ ಕೇರಳವನ್ನು ಸಂಚಲನಗೊಳಿಸಿದ್ದ ಘಟನೆಯಾಗಿದೆ. ಜನರ ವಿರೋಧವನ್ನು ಮೆಟ್ಟಿ ನಿಂತ ಪಿಣರಾಯಿಯವರ ಕೇರಳೀಯಂ ಯಾತ್ರೆ, ಅಡುಗೆ ಮನೆ, ಬೆಡ್ ರೂಂ ಗಳನ್ನೂ ಕೆಡವಿ ಸಾಗಲಿರುವ ಸಿಲ್ವರ್ ಲೈನ್ ರೈಲು, ಪಕ್ಷದ ವಿರುದ್ಧ ಜನರ ಭಾವನೆಯನ್ನು ತಿರುಗಿಸಿತು. ನಂತರ ನಡೆದ ಲೋಕಸಭೆ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತೊಂದು ಉಪಚುನಾವಣೆ ಸಂದರ್ಭದಲ್ಲಿ ಸರ್ಕಾರ ಮತ್ತೆ ಈ ಯೋಜನೆಗೆ ಮುಂದಾಗಿರುವುದು ಸರ್ಕಾರದ ವಿರುದ್ಧ ಜನತೆಯನ್ನು ಇನ್ನಷ್ಟು ಕೆಣಕುವುದು ಖಚಿತ.
ಜನಾಂದೋಲನದ ನಂತರ ನನೆಗುದಿಗೆ ಬಿದ್ದಿದ್ದ ಸಿಲ್ವರ್ ಲೈನ್ ಯೋಜನೆ ಅನುಷ್ಠಾನಕ್ಕೆ ಡಿಪಿಆರ್ ಅನುಮೋದನೆ ಪಡೆಯಲು ಮುಖ್ಯಮಂತ್ರಿ ಪ್ರಯತ್ನ ನಡೆಸುತ್ತಿರುವುದು ಪಕ್ಷದೊಳಗೆ ಆತಂಕ ಮೂಡಿಸಿದೆ. ಇದರ ವಿರುದ್ಧ ಸಿಲ್ವರ್ ಲೈನ್ ವಿರುದ್ಧದ ಜನತಾ ಸಮಿತಿಯೂ ಮತ್ತೆ ಘೀಳಿಡಲು ಮುಂದಾಗಿದೆ.