ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನೇಳರ ಹರೆಯದ ಬಾಲಕಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಗಲ್ಪಾಡಿ ನಿವಾಸಿ ಪ್ರದೀಪನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಬಾಲಕಿ ತಂದೆಗೆ ಆರೋಪಿ ಹಲ್ಲೆಗೆ ಮುಂದಗಿದ್ದು, ಇದನ್ನು ತಡೆಯಲು ಬಂದ ಬಾಲಕಿಯ ಮೈ ಸ್ಪರ್ಶಿಸಿ ಕಿರುಕುಳಕ್ಕೆ ಯತ್ನಿಸಿರುವುದಾಗಿ ದಊರಿನಲ್ಲಿ ತಿಳಿಸಲಾಗಿತು. ಪ್ರದೀಪನ್ ಈ ಹಿಂದೆ 'ಕಾಪಾ'ಅನ್ವಯ ದಾಖಲಾಗಿದ್ದ ಕೇಸಿಗೆ ಸಂಬಂಧಿಸಿ ಬಂಧಿತನಾಗಿದ್ದು, ಜೈಲಿನಿಂದ ಇತ್ತೀಚೆಗಷ್ಟೆ ಹೊರ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.