ಕಾಸರಗೋಡು: ನಗರದ ಪ್ರದನ ಅಮಚೆ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ರೈಲ್ವೆ ಮೈಲ್ ಸರ್ವೀಸ್(ಆರ್‍ಎಂಎಸ್) ಕಚೇರಿಯನ್ನು ಕಣ್ಣೂರು ನ್ಯಾಷನಲ್ ಸಾಟಿರ್ಂಗ್ ಹಬ್‍ನೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ಪುನ: ಪರಿಶೀಲಿಸುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ನಿರ್ದೇಶಿಸಿದೆ
ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಮಂಡಿಸಿದ ನಿರ್ಣಯವನ್ನು ಶಾಸಕ ಇ.ಚಂದ್ರಶೇಖರನ್ ಬೆಂಬಲಿಸಿದರು. ಆರ್‍ಎಂಎಸ್ ಸ್ಥಳಾಂತರಿಸುವುದರಿಂದ ಜಿಲ್ಲೆಯಲ್ಲಿ ರಿಜಿಸ್ಟರ್ಡ್ ಪತ್ರಗಳು ಸೇರಿದಂತೆ ವಿವಿಧ ಅಂಚೆ ಪಾಸೆಲ್‍ಗಳು ವಿಳಾಸದಾರರಿಗೆ ತಲುಪಲು ವಿಳಂಬವಾಗುವ ಆತಂಕವಿದೆ ಎಂಬುದಾಗಿ ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಯಿತು. ಡಿಸೆಂಬರ್ ಆರಂಭದಲ್ಲಿ ವಿಲೀನ ಪ್ರಕ್ರಿಯೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದರೊಂದಿಗೆ ಕಾಸರಗೋಡು ಕೇಂದ್ರದಲ್ಲಿ ನಡೆಯುತ್ತಿದ್ದ ರಿಜಿಸ್ಟರ್ಡ್ ಮತ್ತು ಸಾಮಾನ್ಯ ಪತ್ರಗಳ ವಿಂಗಡಣೆ ಕಾರ್ಯ ಕಣ್ಣೂರು ನ್ಯಾಷನಲ್ ಸಾರ್ಟಿಂಗ್ ಹಬ್‍ಗೆ ಸ್ಥಳಾಂತರವಾಗಲಿದೆ. ಕೇಂದ್ರಸಂಪರ್ಕ ಸಚಿವಾಲಯದ ಹೊಸ ಕ್ರಮದಿಂದ ಜಿಲ್ಲೆಯ ಜನರಿಗೆ ಅಂಚೆ ಸೇವೆ ಸಕಾಲಕ್ಕೆ ಲಭ್ಯವಾಗಲು ಸಮಸ್ಯೆ ಉಂಟಗಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಎಡಿಎಂ ಕೆ.ನವೀನ್ ಬಾಬು ಅವರ ನಿಧನಕ್ಕೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಕಾಸರಗೋಡು ಜಿಲ್ಲೆಯ ಉಜಾರ್ ಉಳ್ವಾರ್ ಗ್ರಾಮವನ್ನು 'ನನ್ನ ಭೂಮಿ' ಸಮಗ್ರ ಪೆÇೀರ್ಟಲ್‍ನಲ್ಲಿ ಸೇರ್ಪಡೆಗೊಳಿಸಿ ದೇಶದ ಮೊದಲ ಸಂಪೂರ್ಣ ಡಿಜಿಟಲ್ ಭೂ ಸಮೀಕ್ಷೆ ದಾಖಲೆಯಾಗಿ ಘೋಷಿಸಲಾಗಿದ್ದು, ಈ ಕಾರ್ಯಕ್ಕೆ ನೇತ್ರತ್ವ ನೀಡಿದ ಜಿಲ್ಲಾಧಿಕಾರಿ ಕೆ. ಇನ್ಬಾಶೆಕರ್ ಅವರನ್ನು ಸನ್ಮಾನಿಸಲಾಯಿತು.
ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನು ನೇಮಿಸುವಂತೆ ನಿರ್ದೇಶಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಹೊಸದಾಗಿ ನಿರ್ಮಿಸಿರುವ ಬಸ್ ನಿರೀಕ್ಷಣಾ ಶೆಲ್ಟರ್‍ಗಳನ್ನು ಮಂಜೂರು ಮಾಡುವ ಬಗ್ಗೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಂಬಂಧಪಟ್ಟವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಹೊಂದಿರುವ ಸಿವಿಲ್ ಸ್ಟೇಷನ್ ಕಂಪೌಂಡ್ ಒಳಭಾಗದ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು, ಇದನ್ನು ಸಂಚಾರಯೋಗ್ಯಗೊಳಿಸುವಂತೆ ಸೂಚಿಸಲಾಯಿತು. ಕಾಂಗಾರಿಗೆ ಶಾಸಕರ ಅನುದಾನ ಮಂಜೂರುಗೊಳಿಸುವುದಾಗಿ ಎನ್.ಎ ನೆಲ್ಲಿಕುನ್ನು ತಿಳಿಸಿದರು. ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಇ. ಚಂದ್ರಶೇಖರನ್ ಎನ್.ಎ ನೆಲ್ಲಿಕುನ್ನು, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ನೀಲೇಶ್ವರಂ ಪುರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.