HEALTH TIPS

ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನಡುವಿದೆ ಇದೆ ಒಪ್ಪಂದ: ಸರಿನ್ ಅವರ ಬಹಿರಂಗಪಡಿಸುವಿಕೆಯು ಸಾಬೀತುಪಡಿಸಿದೆ: ಕೆ.ಸುರೇಂದ್ರನ್

ಪಾಲಕ್ಕಾಡ್: ಕಳೆದ ಚುನಾವಣೆಗಳಲ್ಲಿ ಪಾಲಕ್ಕಾದ್‍ನಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು  ಯುಡಿಎಫ್ ಅಭ್ಯರ್ಥಿ ಶಾಫಿ ಪರಂಬಿಲ್ ಬಿಜೆಪಿ ಅಭ್ಯರ್ಥಿ ಮತವನ್ನು ಬೇರೆಡೆಗೆ ತಿರುಗಿಸಿದ್ದರು ಎಂಬುದು ಬಹಿರಂಗಗೊಂಡಿದೆ. 

ಸರಿನ್ ಅವರ ಬಹಿರಂಗಪಡಿಸುವಿಕೆಯನ್ನು ಚರ್ಚಿಸಲಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಅವರು ಈ ಬಗ್ಗೆ ಬೆಟ್ಟುಮಾಡಿ ವಿವಾದಾತ್ಮಕವಾಗಿ ಪಕ್ಷಾಂತರಗೊಂಡ ಬಗ್ಗೆ ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಮಾತನಾಡಿ, ಕೇರಳದ ಕಾಂಗ್ರೆಸ್-ಸಿಪಿಎಂ ಡೀಲ್ ನಂಬಲರ್ಹವಾದ್ದು ಎಂದಿರುವರು. ಬೆಳಿಗ್ಗೆ ಹೇಳಿದ್ದನ್ನು ಮಧ್ಯಾಹ್ನ ಬದಲಿಸಿ ಹೇಳಿದರೆ ವಸ್ತುತತೆ ಇಲ್ಲದಾಗದೆಂದೂ ಸುರೇಂದ್ರನ್ ಹೇಳಿರುವರು.

2021 ರಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋಮೆನ್ ಇ. ಶ್ರೀಧರನ್ ಗೆಲುವನ್ನು ತಡೆಗಟ್ಟಲು ಕಾಂಗ್ರೆಸ್ ಮತ್ತು ಸಿಪಿಎಂ ಮತಗಳನ್ನು ಹಂಚಿಕೊಂಡಿದೆ ಎಂದು ಡಾ.ಸರಿನ್ ಸಾಬೀತುಪಡಿಸಿದ್ದಾರೆ. ಇದು 3480 ಮತಗಳ ವ್ಯವಹಾರವಾಗಿತ್ತು. ಶ್ರೀಧರನ್ ಇದರಿಂದ ಪರಾಭವಗೊಂಡರು. ಯುಡಿಎಫ್ 54079 ಮತಗಳನ್ನು ಪಡೆದಿತ್ತು. ಎಂದರೆ ಶೇಕಡಾ  38.06 ಆಗುತ್ತದೆ.. ಎನ್ಡಿಎ 50220 ಮತಗಳನ್ನು ಪಡೆದಿತ್ತು.. ಶೇಕಡಾ 35.34 ರಷ್ಟಾಗುತ್ತದೆ. ಆದರೆ ಎಲ್ಡಿಎಫ್ ಕೇವಲ 25.64 ಶೇಕಡಾ ಮತ, ಅಂದರೆ  36433 ಮತಗಳನ್ನು ಪಡೆದಿತ್ತು.

ಪಿ. ಪಿ. ಸರಿನ್ ಅವರು ಮುಖಂಡರ ವಿರುದ್ಧ ಬಂಡೆದ್ದು ಪಕ್ಷ ಬದಲಾಯಿಸಿರುವರು. ಕಾಂಗ್ರೆಸ್-ಸಿಪಿಎಂ ಒಪ್ಪಂದ ನಡೆದಿದೆ ಎಂಬುದಕ್ಕಿದು ಸಾಕ್ಷಿಯಾಗಿದೆ.

ಬಿಜೆಪಿಗೆ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಸಿಪಿಎಂ ನಿರೀಕ್ಷಿಸಿದೆ ಎಂದು ಸರಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವರು. ಸರಿನ್ ಸಿಪಿಎಂ ಜಿಲ್ಲಾ ನಾಯಕತ್ವದ ಬೆಂಬಲದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries