ಕಾಸರಗೋಡು: ನೂತನ ವೇಜ್ ಬೋರ್ಡ್ ರಚಿಸುವುದರೊಂದಿಗೆ, ದೃಶ್ಯ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತರನ್ನೂ ಇದರ ವ್ಯಾಪ್ತಿಗೆ ತರಬೇಕು ಎಂದು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟದ(ಕೆಯುಡಬ್ಲ್ಯೂಜೆ)ಜಿಲ್ಲಾ ಮಹಾಸಭೆಯಲ್ಲಿ ಆಗ್ರಹಿಸಲಾಯಿತು.
ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ನಡೆದ ಸಭೆಯನ್ನು ಒಕ್ಕೂಟದ ರಾಜ್ಯ ಸಮಿತಿ ಕೋಶಾಧಿಕಾರಿ ಸುರೇಶ್ ವೆಳ್ಳಿಮಂಗಲಂ ಉದ್ಘಾಟಿಸಿದರು. ಜಿಲ್ಲಾ ಘಟಕ ಅಧ್ಯಕ್ಷ ಮಹಮ್ಮದ್ ಹಾಶಿಮ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ವಿ.ಪದ್ಮೇಶ್ ವರದಿ ಹಾಗೂ ಕೋಶಾಧಿಕಾರಿ ಶೈಜು ಪಿಲತ್ತಾರ ಲೆಕ್ಕಪತ್ರ ಮಂಡಿಸಿದರು. ಶೆಫೀಕ್ ನಸ್ರುಲ್ಲಾ, ವಿನೋದ್ ಪಾಯಂ, ಟಿ.ಎ. ಶಾಫಿ, ಕೆ.ಗಂಗಾಧರ, ಫೈಸಲ್ ಬಿನ್ ಅಹಮದ್, ವಿ.ಯು. ಮ್ಯಾಥ್ಯೂಕುಟ್ಟಿ, ಶಾಫಿ ತೆರುವತ್, ಎ.ಪಿ.ವಿನೋದ್ ಉಪಸ್ಥಿತರಿದ್ದರು. ನಂತರ ಪ್ರೆಸ್ ಕ್ಲಬ್‍ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ನಡೆಯಿತು.
ಅಧ್ಯಕ್ಷ ಶಿಜು ಕಣ್ಣನ್, ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಾರಾಯಣನ್, ಜತೆ ಕಾರ್ಯದರ್ಶಿ ಪುರುಷೋತ್ತಮ್ ಪೆರ್ಲ, ಕೋಶಾಧಿಕಾರಿ ಸುರೇಂದ್ರನ್ ಮಡಿಕೈ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೈಜು ಪಿಲಾತ್ತರ, ಶಾಫಿ ತೆರುವತ್, ಸತೀಶ್ ಕರಿಚ್ಚೇರಿ, ರಂಜಿತ್ ಮನ್ನಿಪ್ಪಾಡಿ ಅವರನ್ನೊಳಗೊಂಡ ನೂತನ ಸಮಿತಿ ಅಧಿಕಾರ ವಹಿಸಿಕೊಂಡಿತು.