ಕಣ್ಣೂರು: ಕಣ್ಣೂರಿನ ಮಾಜಿ ಎಡಿಎಂ ನವೀನ್ ಬಾಬು ಸಾವಿನ ಪ್ರಕರಣದಲ್ಲಿ ಸಿಪಿಎಂ ನಾಯಕಿ ಪಿಪಿ ದಿವ್ಯಾ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಇಂದು ನ್ಯಾಯಾಲಯದಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ತಲಶ್ಶೇರಿ ಸೆಷನ್ಸ್ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು. ನ್ಯಾಯಾಧೀಶ ಕೆ.ಟಿ.ನಿಸಾರ್ ಅಹಮದ್ ತೀರ್ಪು ನೀಡಿದ್ದಾರೆ.
ಜಿಲ್ಲಾಧಿಕಾರಿ ಆಹ್ವಾನದ ಮೇರೆಗೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಬಂದಿದ್ದು, ಸದುದ್ದೇಶದಿಂದ ಎಡಿಎಂ ವಿರುದ್ಧ ಮಾತನಾಡಿದ್ದೆ ಎಂದು ದಿವ್ಯಾ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ಮನೆಯಲ್ಲಿ ಅಸ್ವಸ್ಥ ತಾಯಿ ಮತ್ತು ಹೆಣ್ಣು ಮಕ್ಕಳಿದ್ದಾರೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ದಿವ್ಯಾಳ ಬಂಧನಕ್ಕೆ ತನಿಖಾ ತಂಡ ಇನ್ನೂ ಕ್ರಮ ಕೈಗೊಂಡಿಲ್ಲ. ಜಾಮೀನು ಅರ್ಜಿ ತಿರಸ್ಕøತಗೊಂಡಿರುವುದರಿಂದ ತನಿಖಾ ತಂಡ ಬಂಧನ ಪ್ರಕ್ರಿಯೆ ಮುಂದುವರಿಸುವ ತವಕದಲ್ಲಿದೆ. ನ್ಯಾಯಾಲಯದ ತೀರ್ಪಿನಿಂದ ಪಕ್ಷಕ್ಕೆ ಮತ್ತು ಪೋಲೀಸರಿಗೆ ಭಾರಿ ಹಿನ್ನಡೆಯಾಗಿದೆ, ಇದುವರೆಗಿನ ರಕ್ಷಣಾ ವಲಯ ಈ ಮೂಲಕ ತೆರವುಗೊಂಡಿದೆ.