HEALTH TIPS

ಗುಜರಾತ್ | ಯುದ್ಧ ವಿಮಾನ ತಯಾರಿಕೆಯ ಖಾಸಗಿ ಘಟಕ ಉದ್ಘಾಟಿಸಿದ ಮೋದಿ, ಸ್ಪೇನ್‌ ಪಿಎಂ

 ಡೋದರ: ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೊ ಸಾಂಚೇಜ್ ಅವರು ವಡೋದರದಲ್ಲಿ ಯುದ್ಧವಿಮಾನ ತಯಾರಿಕೆಯ ಭಾರತದ ಮೊದಲ ಖಾಸಗಿ ಘಟಕವನ್ನು ಉದ್ಘಾಟಿಸಿದರು.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಕ್ಯಾಂಪಸ್‌ನಲ್ಲಿ c-295 ಯುದ್ಧ ವಿಮಾನಗಳನ್ನು ತಯಾರಿಸುವ ಸಂಕೀರ್ಣ ಇದಾಗಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಮೋದಿ. 'ಈ ಸೌಲಭ್ಯವು ಭಾರತ-ಸ್ಪೇನ್ ಸಂಬಂಧವನ್ನು ಬಲಪಡಿಸುತ್ತದೆ. ಅಲ್ಲದೆ 'ಜಗತ್ತಿಗಾಗಿ ಭಾರತದಲ್ಲಿ ತಯಾರಿಸಿ' ಎಂಬ ನಮ್ಮ ಧ್ಯೇಯವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಇಲ್ಲಿ ತಯಾರಾದ ಮಿಲಿಟರಿ ವಿಮಾನಗಳನ್ನು ಭವಿಷ್ಯದಲ್ಲಿ ರಫ್ತು ಮಾಡಲಾಗುವುದು' ಎಂದರು.

'ಈ ಉತ್ಪಾದನೆ ಸೌಲಭ್ಯ ವ್ಯವಸ್ಥೆಯು ಭಾರತದ ನಾಗರಿಕ ವಿಮಾನಗಳನ್ನೂ ತಯಾರಿಸಲು ಸಹಾಯ ಮಾಡಲಿದೆ' ಎಂದು ಭರವಸೆ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸ್ಪೇನ್‌ ಪ್ರಧಾನ್ ಪೆಡ್ರೊ, '2026 ರಲ್ಲಿ ಈ ಸೌಲಭ್ಯದಿಂದ ಮೊದಲ ವಿಮಾನವನ್ನು ಸಿದ್ಧಪಡಿಸಿ ಹೊರತರಲಾಗುವುದು' ಎಂದರು.

2021ರ ಸೆಪ್ಟೆಂಬರ್‌ನಲ್ಲಿ ಭಾರತ 56 C -295 ವಿಮಾನಗಳನ್ನು ಸೇರ್ಪಡೆಗೊಳಿಸಲು ಏರ್‌ಬಸ್‌ ಡಿಫೆನ್ಸ್‌ ಮತ್ತು ಸ್ಪೇಸ್‌ ಸಂಸ್ಥೆಯೊಂದಿಗೆ ₹21 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ವಿಮಾನಗಳು ವಾಯುಸೇನೆಯಲ್ಲಿದ್ದ ಅವ್ರೋ-748 ವಿಮಾನದ ಪರ್ಯಾಯವಾಗಲಿವೆ.

ಈ ಒಪ್ಪಂದದ ಪ್ರಕಾರ, ಸ್ಪೇನ್‌ನ ಸೆವಿಲ್ಲೆಯಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಮೊದಲ 16 ಯುದ್ಧ ವಿಮಾನಗಳನ್ನು ಏರ್‌ಬಸ್‌ ರವಾನಿಸಲಿದೆ.

ಉಳಿದ 40 ವಿಮಾನಗಳು ಎರಡು ಕಂಪನಿಗಳ ನಡುವಿನ ಒಪ್ಪಂದದ ಭಾಗವಾಗಿ ಭಾರತದಲ್ಲಿ ಈಗ ಉದ್ಘಾಟಿಸಲಾದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್‌ (TASL)ನಲ್ಲಿ ತಯಾರಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries