ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾ ಗ್ರಂಥಾಲಯ ಏತಡ್ಕ ಇದರ ವತಿಯಿಂದ ಗಾಂಧಿ ಜಯಂತಿ ಆಚರಣೆಯನ್ನು ಗ್ರಂಥಾಲಯದ ಪರಿಸರವನ್ನು ಸ್ವಚ್ಛತಾ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಅಧ್ಯಕ್ಷ ವೈ.ಕೆ. ಗಣಪತಿ ಭಟ್ ಏತಡ್ಕ ಇವರು ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಗಣರಾಜ ಕೆ ಏತಡ್ಕ, ವಯೋಜನ ವೇದಿಕೆಯ ಕಾರ್ಯದರ್ಶಿ ನರಸಿಂಹ ಭಟ್ ಕಟ್ಟದಮೂಲೆ, ಜೊತೆ ಕಾರ್ಯದರ್ಶಿ ಚಂದ್ರಶೇಖರ ಏತಡ್ಕ, ಗ್ರಂಥಪಾಲಕಿ ಶಾಂತಕುಮಾರಿ ಹಾಗೂ ಸದಸ್ಯರು ಸಹಕಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.