ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ 2025ರ ಫೆಬ್ರವರಿ 2ರಿಂದ 10ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಇದರ ಯಶಸ್ವಿಗಾಗಿ ಬೆಳ್ಳೂರು ದೇವಸ್ಥಾನದಲ್ಲಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಯಿತು.
ಪ್ರಾದೇಶಿಕ ಸಮಿತಿ ಗೌರವಾಧ್ಯಕ್ಷರಾಗಿ ವಿ ಎಸ್ ಸುಬ್ರಹ್ಮಣ್ಯ ಕಡಂಬಳಿತ್ತಾಯ, ಶಂಕರ ನಾರಾಯಣ ಕಡಂಬಳಿತ್ತಾಯ, ನೆಟ್ಟಣಿಗೆ ದೇವಸ್ಥಾನ ಟ್ರಸ್ಟ್ ಪದ್ಮನಾಭ ಮಣಿಯಾಣಿ ಕುಳದಪ್ಪಾರೆ, ಕಲ್ಲಗ ಚಂದ್ರಶೇಖರ ರಾವ್, ಡಾ. ಮೋಹನದಾಸ್ ರೈ ಕೊಡೆಂಕಿರಿ, ಬೆಳ್ಳುರು ಗ್ರಾಪಂ ಅಧ್ಯಕ್ಷ ಶ್ರೀಧರ್ ಎಂ, ಅಧ್ಯಕ್ಷರಾಗಿ ಬೆಳ್ಳೂರು ಶ್ರೀ ಮಹಾ ವಿಷ್ಣು ದೇವಸ್ಥಾನ ಟ್ರಸ್ಟಿ ಗಂಗಾಧರ ಬಲ್ಲಾಳ್, ಉಪಾಧ್ಯಕ್ಷರಾಗಿ ಗ್ರಾಪಂ ಉಪಾಧ್ಯಕ್ಷೆ ಗೀತಾ ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಉದಯ ಕುಮಾರ್ ಎನ್, ರವೀಂದ್ರನಾಥ್ ಶೆಟ್ಟಿ,
ಸತ್ಯನಾರಾಯಣ ಬಲ್ಲಾಳ್, ಜಯರಾಜ್ ರೈ, ರಾಘವ ಕನಕತ್ತಡಿ, ಚಂದ್ರಶೇಖರ್ ರೈ ನಕೂರ್, ಭಾರತ್ ಬಸ್ತಿ, ದಾಮೋದರ ಕುಲಾಲ್, ನರೇಂದ್ರ ಕುಮಾರ್, ಚಂದ್ರಶೇಖರ್ ಆಚಾರ್ಯ, ಕುಞÂರಾಮ ಮಾಸ್ಟರ್, ಮಾಲತಿ ಜೆ ರೈ ಜಯಾನಂದ ಕುಳ. ರವಿ ಶಂಕರ್ ಯಾದವ್ ಬಜ, ಪ್ರಧಾನ ಕಾರ್ಯದರ್ಶಿಯಾಗಿ ಗ್ರಾಪಂ ಸ್ಥಾಯೀ ಸಮಿತಿ ಅದ್ಯಕ್ಷ ಚಂದ್ರಹಾಸ ರೈ ಮುಂಡಾಸ್, ಕಾರ್ಯದರ್ಶಿಯಾಗಿ ಪ್ರದೀಪ ಕುಮಾರ್ ಪುಳಿತ್ತಡಿ, ಗಣೇಶ್ ರೈ ಮುಂಡಾಸ್, ಹರ್ಷ ಪ್ರಸಾದ್ ರೈ, ಗಣೇಶ್ ಆಚಾರ್ಯ, ಗುರುರಾಜ್ ಆನೆಕ್ಕಳ, ರವೀಂದ್ರ ಪೂಜಾರಿ, ರವೀಶ ರೈ ಮುಂಡಾಸ್, ಕೋಶಾಧಿಕಾರಿಯಾಗಿ ರೋಹಿತ್ ಬನಗಡ್ಡೆ ಅವರನ್ನು ಆಯ್ಕೆ ಮಾಡಲಾಯಿತು.