ಗಾಡಿ ಹಾಳಾಗಿ ದುಬೈನ ಮರುಭೂಮಿಯೊಂದರ ಮಧ್ಯೆ ಸಿಲುಕಿಕೊಂಡಿದ್ದ ಯುವತಿಯರಿಬ್ಬರು 'ಊಬರ್'ನಲ್ಲಿ ಒಂಟೆ ಬುಕ್ ಮಾಡಿ ಪಾರಾಗಿ ಬಂದಿದ್ದಾರೆ. ರಕ್ಷಣೆಗೆ ಮೊರೆ ಇಡುತ್ತಿದ್ದ ಅವರ ಪಾಲಿಗೆ ಊಬರ್‌ನ 'ಒಂಟೆ ಸೇವೆ' ಆಪತ್ಭಾಂಧವನಾಗಿದೆ!
ಗಾಡಿ ಹಾಳಾಗಿ ದುಬೈನ ಮರುಭೂಮಿಯೊಂದರ ಮಧ್ಯೆ ಸಿಲುಕಿಕೊಂಡಿದ್ದ ಯುವತಿಯರಿಬ್ಬರು 'ಊಬರ್'ನಲ್ಲಿ ಒಂಟೆ ಬುಕ್ ಮಾಡಿ ಪಾರಾಗಿ ಬಂದಿದ್ದಾರೆ. ರಕ್ಷಣೆಗೆ ಮೊರೆ ಇಡುತ್ತಿದ್ದ ಅವರ ಪಾಲಿಗೆ ಊಬರ್‌ನ 'ಒಂಟೆ ಸೇವೆ' ಆಪತ್ಭಾಂಧವನಾಗಿದೆ!
ಮರುಭೂಮಿಯ ಮಧ್ಯೆ ಸಹಾಯಕ್ಕಾಗಿ ಎದುರು ನೋಡುತ್ತಿರುವ ಇಬ್ಬರ ಪೈಕಿ ಒಬ್ಬರು ಊಬರ್ ಆಯಪ್ ತೆರೆದಿದ್ದಾರೆ.
ಕೆಲ ಹೊತ್ತಲ್ಲೇ ಒಂಟೆಯ ಮೂಗುದಾರ ಹಿಡಿದುಕೊಂಡು ವ್ಯಕ್ತಿಯೊಬ್ಬ ನಡೆದುಕೊಂಡು ಬಂದಿದ್ದಾರೆ. ಇದನ್ನು ನೋಡಿ ಇಬ್ಬರೂ ಅಚ್ಚರಿಗೊಂಡಿದ್ದಾರೆ.
'ನಾನು ಒಂಟೆಯ ಚಾಲಕ' ಎಂದು ಆತ ಪರಿಚಯಿಸಿಕೊಂಡಿದ್ದಾನೆ. ಇವೆಲ್ಲವೂ ಯುವತಿಯರು ಮಾಡಿದ ವಿಡಿಯೊದಲ್ಲಿ ಸೆರೆಯಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಗೆ ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದು, 'ಕಳೆದು ಹೋಗಿದ್ದ ನಾವು ಊಬರ್ ಒಂಟೆ ಸೇವೆಯನ್ನು ಬುಕ್ ಮಾಡಿದ್ದೆವು' ಎಂದು ಹೇಳುತ್ತಿರುವುದೂ ವಿಡಿಯೊದಲ್ಲಿದೆ.
'ನೀವು ಜೀವನೋಪಾಯಕ್ಕಾಗಿ ಏನು ಮಾಡುತ್ತೀರಿ' ಎನ್ನುವ ಪ್ರಶ್ನೆಗೆ 'ನಾನು ಊಬರ್ ಒಂಟೆ ಚಲಾಯಿಸುತ್ತೇನೆ. ಮರುಭೂಮಿ ಮಧ್ಯೆ ಸಿಲುಕಿದವರಿಗೆ ಸಹಾಯ ಮಾಡುತ್ತೇನೆ...' ಎಂದು ವ್ಯಕ್ತಿ ಹೇಳಿದ್ದಾನೆ.