ಕಾಸರಗೋಡು: ಕೊರಕ್ಕೋಡು ಶ್ರೀ ದುರ್ಗಾಪರಮೇಶ್ವರೀ ಮಹಾಕಾಳಿ ಕಾಶೀ ಕಾಳಭೈರವೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ಅ. 12ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದುಬರುತ್ತಿದೆ. ಪ್ರತಿ ದಿನ ಶ್ರೀ ದೇವರಿಗೆ ವಿಶೇಷ ಪೂಜೆ, ಭಜನೆ ನಡೆಯುವುದು.
9ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಪ್ರಾರ್ಥನೆ, 8ಕ್ಕೆ ಬಟ್ಟಲು ಮೆರವಣಿಗೆ, 9.30ಕ್ಕೆ ಗಣಪತಿ ಹವನ, 11ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 6ರಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 12ಕ್ಕೆ ಮಂಗಳಸ್ನಾನ ನಡೆಯುವುದು. 10ರಂದು ಬೆಳಗ್ಗೆ9.30ಕೆಕ ಗಣಪತಿ ಹವನ, ಯಕ್ಷಗಾನ ನಡೆಯುವುದು. 11ರಂದು ಬೆಳಗ್ಗೆ ಆಯುಧಪೂಜೆ, ಮಹಾನವಮಿ, 12ರಂದು ಬೆಳಗ್ಗೆ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ, ಗಣಪತಿ ಹೋಮ, ಅಕ್ಷರಾಬ್ಯಾಸ, ಸಂಜೆ 7ಕ್ಕೆ ಪಲ್ಲಕ್ಕಿ ಪೂಜೆ ನಡೆಯುವುದು.