ಶ್ರೀನಗರ: ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಒಳನುಸುಳುವಿಕೆ ವಿರೋಧಿ ಜಾಲ ತುಂಬಾ ಪ್ರಬಲವಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ಶ್ರೀನಗರ: ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಒಳನುಸುಳುವಿಕೆ ವಿರೋಧಿ ಜಾಲ ತುಂಬಾ ಪ್ರಬಲವಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ಚಳಿಗಾಲ ಆರಂಭಕ್ಕೂ ಮುನ್ನವೇ ಗಡಿಯಲ್ಲಿ ಒಳನುಸುಳುವಿಕೆಯ ಪ್ರಯತ್ನ ಹೆಚ್ಚಲಿದೆ. ಸೇನೆಯ ಸಮನ್ವಯದೊಂದಿಗೆ ಎಲ್‌ಒಸಿಯ ಜಾಲವನ್ನು ಬಲಾಢ್ಯಗೊಳಿಸಲಾಗಿದ್ದು, ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎಂದು ಕಾಶ್ಮೀರ ವಲಯದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಇನ್‌ಸ್ಪೆಕ್ಟರ್ ಜನರಲ್ ಅಶೋಕ್ ಯಾದವ್ ಶನಿವಾರ ತಿಳಿಸಿದರು.