ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ 3ನೇ ವಾರ್ಡ್ ನಾಟೇಕಲ್ ತೌಡುಗೋಳಿ ಸಮೀಪ ವಾಸವಿರುವ ಕಿವಿ ಕೇಳದ ಅನಾರೋಗ್ಯ ಪೀಡಿತ 73 ವರ್ಷದ ವಯೋ ವೃದ್ಧ ಅಣ್ಣಪ್ಪ ನಾಯಕ್ ತನ್ನ ಅಸಹಾಯಕ ಸ್ಥಿತಿಯನ್ನು ಪಂಚಾಯತ್ ಅಧಿಕೃತರಿಗೆ ತಿಳಿಸಿದರೂ ಅಧಿಕೃತರು ಅನಾಸ್ಥೆ ತೋರಿಸಿರುವರೆಂಬ ಆರೋಪ ಕೇಳಿಬಂದಿದೆ. ಸ್ಥಳೀಯ ನಾಗರಿಕರು ಮನವಿ ನೀಡಿದರೂ ಪಂಚಾಯತಿ ಆಡಳಿತವಾಗಲಿ, ಅರೋಗ್ಯ ಇಲಾಖೆಯಾಗಲಿ, ಸಹಕರಿಸದೆ ಬೇಜವಾಬ್ದಾರಿತನ ಪ್ರದರ್ಶಸಿ ಉದ್ದಟತನ ತೋರುತ್ತಿದೆ ಎಂದು ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ಆರೋಪಿಸಿದೆ.
ವಯೋ ಸಹಜ ರೋಗಗಳು, ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಗಂಭೀರ ಸ್ಥಿತಿಯಲ್ಲಿರುವ ಮನೆ, ಕಣ್ಣು ಕಾಣಿಸದೆ ಏಕಾಂಗಿಯಾಗಿರುವ ಔಷಧ ಖರೀದಿಗೂ, ಮನೆ ದುರಸ್ಥಿಗಾಗಲಿ, ಒಂದು ಹೊತ್ತಿನ ಊಟಕ್ಕೂ ಪರದಾಡುವ ವ್ಯೆಕ್ತಿಗೆ, ವಿದ್ಯುತ್ ಸಂಪರ್ಕವನ್ನೂ ನೀಡದೆ ಸಂಕಷ್ಟದಲ್ಲಿದ್ದಾರೆ ಅಣ್ಣಪ್ಪ ನಾಯಕ್. ಅತೀ ದಾರಿದ್ಯ ಪಟ್ಟಿಯಲ್ಲಿ ಸೇರಿಸದೆ, ಔಷದ ನೀಡದ ಪಲೇಟಿವ್ ಕೇರ್ ವಿಭಾಗ, ಸೋರುತ್ತಿರುವ ಮನೆ ದುರಸ್ಥಿಗೆ ಹಣ ನೀಡದೆ ಸತಾಯಿಸುತ್ತಿದೆ ಎನ್ನಲಾಗಿದೆ.
ಮನೆ ಸಂಪರ್ಕಿಸದ ಆಶಾ ಕಾರ್ಯಕರ್ತೆ, ಮನೆ ಮುಂದೆ ಇರುವ ಬಾವಿಗೆ ತಡೆಗೋಡೆ ಇಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿ ಇದ್ದರೂ ತಮಗೆ ಸಂಬಂಧವೆ ಇಲ್ಲದಂತೆ ವರ್ತಿಸುವ ವರ್ಕಾಡಿ ಪಂಚಾಯತಿ ಆಡಳಿತ ಸಮಿತಿ 10ದಿನಗಳ ಒಳಗಾಗಿ ಅಣ್ಣಪ್ಪ ನಾಯಕ್ ರಿಗೆ ಸೂಕ್ತ ವ್ಯವಸ್ಥೆ, ಮನೆ ದುರಸ್ಥಿ, ವಿದ್ಯುತ್ ಸಂಪರ್ಕ, ಅತೀ ದಾರಿದ್ಯ ಪಟ್ಟಿಯಲ್ಲಿ ಸೇರಿಸುವುದು ಹಾಗೂ ಲೈಫ್ ಯೋಜನೆಯಲ್ಲಿ ಸೇರಿಸುವಿಕೆ ಮಾಡಬೇಕೆಂದು ಒತ್ತಾಯಿಸಲಾಗಿದೆ.
ಗ್ರಾಮ ಪಂಚಾಯತಿ ಇವರ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ, ಆಡಳಿತ ಬೇಜವಾಬ್ದಾರಿ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ಪಂಚಾಯತಿ ಸಮಿತಿ ತಿಳಿಸಿದೆ.
ಬಿಜೆಪಿ ಕೋರ್ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು ಹಾಗೂ ನಾಟೇಕಲ್ ಅಣ್ಣಪ್ಪ ನಾಯಕ್ ರವರ ಮನೆಯನ್ನು ಸಂದರ್ಶಸಿ ಬಿಜೆಪಿ ನಾಯಕರು ಮಾಹಿತಿ ಸಂಗ್ರಹಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಈಗಲೂ ನಾಗರೀಕ ಸಮಾಜದಲ್ಲಿ ಜೀವಿಸುವುದು ತಲೆ ತಗ್ಗಿಸಬೇಕಾದ ಮನಹಾನಿಕರ ವಿಚಾರ ಎಂದು ಅಭಿಪ್ರಾಯ ಪಡಲಾಯಿತು.
ಬಿಜೆಪಿ ಮುಖಂಡರಾದ ಭಾಸ್ಕರ್ ಪೆÇಯ್ಯೆ, ಆದರ್ಶ ಬಿ.ಎಂ, ಮಣಿಕಂಠ ರೈ, ಯತೀರಾಜ್ ಶೆಟ್ಟಿ, ಎ.ಕೆ.ಕಯ್ಯಾರ್, ವಿವೇಕಾನಂದ, ನಾಗೇಶ್ ಬಳ್ಳೂರ್, ರವಿರಾಜ್ ಮೊದಲಾದವರು ಉಪಸ್ಥಿತರಿದ್ದರು.