ಸಿಯೋಲ್: ದೂರಗಾಮಿ ಖಂಡಾಂತರ ಕ್ಷಿಪಣಿಯ ಮತ್ತೊಂದು ಪರೀಕ್ಷೆ ನಡೆಸಿದ್ದಾಗಿ ಉತ್ತರ ಕೊರಿಯಾ ಗುರುವಾರ ಹೇಳಿದೆ. ಈ ಕ್ಷಿಪಣಿ ಇದುವರೆಗೆ ನಡೆಸಿದ ಪರೀಕ್ಷೆಗಿಂತ ಹೆಚ್ಚಿನ ದೂರ ಕ್ರಮಿಸಿದೆ ಎಂದು ದೇಶದ ಸುದ್ದಿ ಸಂಸ್ಥೆ KCNA ವರದಿ ಮಾಡಿದೆ.
ಸಿಯೋಲ್: ದೂರಗಾಮಿ ಖಂಡಾಂತರ ಕ್ಷಿಪಣಿಯ ಮತ್ತೊಂದು ಪರೀಕ್ಷೆ ನಡೆಸಿದ್ದಾಗಿ ಉತ್ತರ ಕೊರಿಯಾ ಗುರುವಾರ ಹೇಳಿದೆ. ಈ ಕ್ಷಿಪಣಿ ಇದುವರೆಗೆ ನಡೆಸಿದ ಪರೀಕ್ಷೆಗಿಂತ ಹೆಚ್ಚಿನ ದೂರ ಕ್ರಮಿಸಿದೆ ಎಂದು ದೇಶದ ಸುದ್ದಿ ಸಂಸ್ಥೆ KCNA ವರದಿ ಮಾಡಿದೆ.
ನಮ್ಮ ಶತ್ರುಗಳ ಅಪಾಯಕಾರಿ ನಡೆಗಳು, ನಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
'ಅಣ್ವಸ್ತ್ರ ಸಾಮರ್ಥ್ಯವನ್ನು ಬಲಪಡಿಸುವ ತನ್ನ ನಿರ್ಧಾರದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ' ಎಂದು ಶಪಥಗೈದಿದ್ದಾರೆ.
'ಈ ಪರೀಕ್ಷೆಯು ಮಿಲಿಟರಿ ಕ್ರಮವಾಗಿದ್ದು, ನಮ್ಮ ಪ್ರತಿಸ್ಪರ್ಧಿಗಳಿಗೆ ತಿಳಿಸುವ ಉದ್ದೇಶವನ್ನು ಪೂರೈಸಿದೆ'ಎಂದು ಹೇಳಿದ್ದಾರೆ.
ದೇಶದ ಪರಮಾಣು ನಿರೋಧಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಖಂಡಾಂತರ ಕ್ಷಿಪಣಿಯ 'ಅತ್ಯಂತ ನಿರ್ಣಾಯಕ' ಪರೀಕ್ಷೆಯಲ್ಲಿ ನಾಯಕ ಕಿಮ್ ಜಾಂಗ್ ಉನ್ ಭಾಗವಹಿಸಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿದೆ.
ಉತ್ತರ ಕೊರಿಯಾದ ಈ ನಡೆಯನ್ನು ಅಮೆರಿಕ ಖಂಡಿಸಿದ್ದು, 'ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನಿರ್ಣಯಗಳ ಸ್ಪಷ್ಟ ಉಲ್ಲಂಘನೆ' ಎಂದು ಹೇಳಿದೆ. ಅಲ್ಲದೆ ಇದು ಭದ್ರತೆಯನ್ನು ಅಸ್ಥಿರಗೊಳಿಸುವ ಅಪಾಯವನ್ನುಂಟು ಮಾಡಿದೆ' ಎಂದಿದೆ.