ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೊವ್ವಲ್ ಬೆಂಚ್‍ಕೋರ್ಟ್ ಸನಿಹದ ನಿವಾಸಿ ಜಾಪರ್ ಎಂಬವರ ಪತ್ನಿ ಶೈಮಾ(35)ಅವರ ಮೃತದೇಹ ಮನೆ ಸನಿಹದ ಸ್ನಾನದ ಗೃಹದಲ್ಲಿ ನೇಣು ಬಿಗಿದ ಸ್ತಿತಿಯಲ್ಲಿ ಪತ್ತೆಯಾಗಿದೆ. ಪತಿ ಹಾಗೂ ಇವರ ಐದು ಮಂದಿ ಮಕ್ಕಳು ಮನೆಯಲ್ಲಿದ್ದ ಸಂದರ್ಭ ಕೃತ್ಯವೆಸಗಿದ್ದಾರೆನ್ನಲಾಗಿದೆ. ಶೈಮಾ ನೇಣು ಬಿಗಿದು ಆತ್ಮಹತ್ಯೆಗೈದಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಅಶ್ರಫ್ ನಾಪತ್ತೆಯಾಗಿದ್ದನು. ಅಶ್ರಫ್ ಕಾಸರಗೋಡಿನಲ್ಲಿ ವ್ಯಾಪಾರಿಯಾಗಿದ್ದನು. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.