ಬದಿಯಡ್ಕ: ಕನ್ಸ್ಟ್ರಕ್ಷನ್ ವರ್ಕರ್ಸ್ ಸೂಪರ್‍ವೈಸರ್ಸ್ ಅಸೋಸಿಯೇಶನ್ ಸೀತಾಂಗೋಳಿ ವಲಯ ಸಮ್ಮೇಳನ ಭಾನುವಾರ ಬದಿಯಡ್ಕ ಬೋಳುಕಟ್ಟೆ ಸಿ.ಎಚ್.ಟರ್ಫ್ ಮೈದಾನದಲ್ಲಿ ಜರಗಿತು. ಬೆಳಗ್ಗೆ ಬದಿಯಡ್ಕ ಪೇಟೆಯಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗಟ್ಟಿ ಧ್ವಜಾರೋಹಣ ಮಾಡಿದರು. ಸಿ.ಎಂ.ಎಸ್.ಎ.ವಲಯ ಅಧ್ಯಕ್ಷ ವಿಠಲ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಎ.ಆರ್. ಮೋಹನನ್ ಉದ್ಘಾಟಿಸಿದರು.
ರಾಜ್ಯ ಉಪಾಧ್ಯಕ್ಷ ಪಿ. ಆರ್. ಶಶಿ, ರಾಜ್ಯ ಸಲಹಾ ಸಮಿತಿ ಉಪಾಧ್ಯಕ್ಷ ಪಿ.ಪಿ.ಕುಂಞÂ ಕಣ್ಣನ್ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಿದರು. ಜಿಲ್ಲಾ ಕಾರ್ಯದರ್ಶಿ ಪಿ.ಅರವಿಂದಾಕ್ಷನ್ ಸಂಘಟನೆಯ ವಿವರಣೆ ಹಾಗೂ ವಲಯ ಕಾರ್ಯದರ್ಶಿ ಪ್ರಾನ್ಸಿಸ್ ಕ್ರಾಸ್ತ ಚಟುವಟಿಕಾ ವರದಿ ಮಂಡಿಸಿದರು. ವಲಯ ಕೋಶಾಧಿಕಾರಿ ಮಹೇಶ್ ಕುಮಾರ್ ಆಯ-ವ್ಯಯ ಲೆಕ್ಕ ಮಂಡನೆ ಮಾಡಿದರು. ವಲಯ ಕಾರ್ಯದರ್ಶಿ ವಿನೋದ್ ಚೆಂಗಳ ಕುಟುಂಬ ಕ್ಷೇಮ ಯೋಜನೆಯ ವಿವರಣೆ ನೀಡಿದರು. ಆರ್. ರಾಜನ್, ಸೀತಾರಾಮ, ಮಹಾಲಿಂಗ, ವಸಂತ ರೈ, ಹಿಲರಿ ಡಿಸೋಜ ಪೆರ್ಲ, ಹರೀಶ್ ಕೋಟೆಕ್ಕಾರು ಶುಭಾಶಂಸನೆಗೈದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ, ಪ್ರತಿಜ್ಞಾ ಮತ್ತು ಪದಗ್ರಹಣ ನಡೆಯಿತು. ಸಿ.ಎಂ.ಎಸ್.ಎ.ವಲಯ ಪ್ರತಿನಿದಿಗಳಾದ ಮುರಳಿ ಮಾಯಿಪ್ಪಾಡಿ ಸ್ವಾಗತಿಸಿ, ರವೀಂದ್ರ ವಂದಿಸಿದರು. ಲ್ಯಾನ್ಸಿ ಡಿಸೋಜ ನಿರೂಪಿಸಿದರು.