ಕಾಸರಗೋಡು: ಕೇರಳ ಆರೋಗ್ಯ ವಿಶ್ವವಿದ್ಯಾಲಯ ಉತ್ತರ ವಲಯ ಕಲೋತ್ಸವ ಉದುಮ ಪೆರಿಯಾದ ಸಿ-ಮೆಟ್ ನಸಿರ್ಂಗ್ ಕಾಲೇಜಿನಲ್ಲಿ ಅಕ್ಟೋಬರ್ 17 ರಿಂದ 20ರ ವರೆಗೆ ನಡೆಯಲಿದೆ. ಅಕ್ಟೋಬರ್ 17 ರಂದು ಖ್ಯಾತ ಕವಯತ್ರಿ ಸಿ.ಪಿ.ಶುಭಾ ಆಫ್ ಸ್ಟೇಜ್ ಸ್ಪರ್ಧೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಜನರಲ್ ಕನ್ವೀನರ್ ಪ್ರಣವ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 19 ಮತ್ತು 20 ರಂದು ವೇದಿಕೆ ಸ್ಪರ್ಧೆಗಳು ನಡೆಯಲಿದ್ದು, ಅ. 19ರಂದು ಉದುಮ ಕ್ಷೇತ್ರದ ಶಾಸಕ ಸಿ. ಎಚ್ ಕುಞಂಬು ಉದ್ಘಾಟಿಸುವರು. 20ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಪಿ.ಪಿ.ಕುಞÂಕೃಷ್ಣನ್ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಲೋತ್ಸವದ ಪ್ರಚಾರಾರ್ಥ ಫ್ಲಾಶ್ ಮಾಬ್ ಹಾಗೂ ಡಂಗುರ ಮೆರವಣಿಗೆ ನಡೆಯಿತು. ಕಾಸರಗೋಡು, ಕಣ್ಣೂರು, ವಯನಾಡು, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳ 63 ಕಾಲೇಜುಗಳಿಂದ ಸುಮಾರು 4,000 ಮಂದಿ ಸ್ಪರ್ಧಾಳುಗಳು ಪಾಲ್ಗೊಳ್ಳುವರು. ಒಟ್ಟು 103 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ಕೆ. ಮಣಿಕಂಠನ್, ಕೆಯುಎಚ್‍ಎಸ್ ಅಧ್ಯಕ್ಷೆ ಕಾನಿಷ್ಕಾ ಬಿ, ಕಾರ್ಯಕ್ರಮ ಸಮಿತಿ ಉಪಾಧ್ಯಕ್ಷ ಸ್ಮಿತಾರಾಣಿ, ಸಂಚಾಲಕ ರಿಷಿತಾ ಸಿ. ಪವಿತ್ರನ್ ಉಪಸ್ಥಿತರಿದ್ದರು.