ಕಾಸರಗೋಡು: ನೆಹರು ಯುವ ಕೇಂದ್ರ ಕಾಸರಗೋಡು ನೇತೃತ್ವದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್ ಘಟಕ, ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸ್ಟೂಡೆಂಟ್ ಪೆÇಲೀಸ್ ಕೆಡೆಟ್, ಜೀವಂಧರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವೆಸ್ಟ್ ಕೊಯುವಲ್ ಮತ್ತು ಸ್ನೇಹತಿರಾ ಒಕ್ಕೂಟ ಸಹಯೋಗದಲ್ಲಿ ತೈಕಡಪ್ಪುರ ಕರಾವಳಿಯ ಮೆಗಾ ಸ್ವಚ್ಛತಾ ಅಭಿಯಾನ ನಡೆಯಿತು. ಗಾಂಧೀಜಯಂತಿ ಅಂಗವಾಗಿ ದೇಶಾದ್ಯಂತ 77 ಕರಾವಳಿ ಪ್ರದೇಶದಲ್ಲಿ ಸ್ವಚ್ಛತಾಹೀ ಸೇವಾ ಯೋಜನೆಯನ್ವಯ ನೆಹರು ಯುವ ಕೇಂದ್ರದ ನೇತೃತ್ವದಲ್ಲಿ ಇಂದು ಕರಾವಳಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈ ಭಾರತ್ ಸಂಘಟನೆಯ ಸುಮಾರು 400ಮಂದಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ಉದ್ಘಾಟಿಸಿದರು. ಉಪಾಧ್ಯಕ್ಷ ಮುಹಮ್ಮದ್ ರಫಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್ ಸೆ.17ರಿಂದ ಅಕ್ಟೋಬರ್ 2ರವರೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳ ಕುರಿತು ವಿವರಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾ, ನೀಲೇಶ್ವರಂ ಪೆÇಲೀಸ್ ಇನ್ಸ್‍ಪೆಕ್ಟರ್ ನಿಬಿನ್ ಜಾಯ್, ಡಾ. ಕೆ.ವಿ.ವಿನೀಶ್ ಕುಮಾರ್, ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಸುಮಲತಾ, ವಾರ್ಡ್ ಸದಸ್ಯರಾದ ಶಶಿಕುಮಾರ್, ಬಾಬು, ಚಾಯೋತ್ ಜಿ.ಎಚ್.ಎಸ್.ಎಸ್.ಎಸ್.ಪಿ.ಸಿ ಸಿವಿಲ್ ಪೆÇಲೀಸ್ ಅಧಿಕಾರಿ ಸುನೀಲ್, ಜೀವನ್ ಧಾರಾ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಪ್ರತಿನಿಧಿ ರಾಜೀವನ್ ಮೊದಲಾದವರು ಉಪಸ್ಥಿತರಿದ್ದರು