ಕಾಸಾರಗೋಡು: ಕಿನಾನೂರು ಕರಿಂದಳಂ ಪಂಚಾಯತಿಯ ಕಡಲಾಡಿಪ್ಪಾರದಲ್ಲಿ ಅ.16 ರಂದು ರಾತ್ರಿ ಉಂಟಾದ ಸ್ಪೋಟದ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಕೆಲವೇ ನಿಮಿಷದ ಅಂತರದಲ್ಲಿ ಹತ್ತರಷ್ಟು ಸ್ಪೋಟ ಉಂಟಾಗಿದ್ದು, ಇದರಿಂದ ಆತಂಕಕ್ಕೆ ಕಾರಣವಾಗಿದೆ. ಹತ್ತಿರದಲ್ಲಿ ಯಾವುದೇ ಉತ್ಸವಗಳು ನಡೆಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಸ್ಪೋಟದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.