HEALTH TIPS

ಅಸ್ಸಾಂನಲ್ಲಿ ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು

 ವದೆಹಲಿ: ಅಸ್ಸಾಂನ ಅಗರ್ತಲಾದಿಂದ ಮುಂಬೈಗೆ ತೆರಳುತ್ತಿದ್ದ ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ ರೈಲು ಡಿಬಾಲೊಂಗ್‌ ನಿಲ್ದಾಣದ ಬಳಿ ಹಳಿ ತಪ್ಪಿದೆ ಎಂದು ರೈಲ್ವೆ ವಕ್ತಾರ ತಿಳಿಸಿದ್ದಾರೆ.

'ಇಂದು (ಗುರುವಾರ) ಮಧ್ಯಾಹ್ನ 3.55ರ ಸುಮಾರಿಗೆ ಲಾಮ್‌ಡಿಂಗ್ ವಿಭಾಗದ ಲಾಮ್‌ಡಿಂಗ್‌-ಬರ್ದಾರ್ಪುರ್‌ ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ.

ಬೆಳಿಗ್ಗೆ ಅಗರ್ತಲಾದಿಂದ ಹೊರಟಿದ್ದ ರೈಲು ಮುಂಬೈಗೆ ತೆರಳುತ್ತಿತ್ತು. ರೈಲಿನ ಎಂಜಿನ್‌ ಸೇರಿದಂತೆ ಎಂಟು ಬೋಗಿಗಳು ಹಳಿತಪ್ಪಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ' ಎಂದು ಈಶಾನ್ಯ ರೈಲ್ವೆ ವಲಯದ ಸಿಪಿಆರ್‌ಒ ಹೇಳಿದ್ದಾರೆ.

ಲಾಮ್‌ಡಿಂಗ್‌-ಬರ್ದಾರ್ಪುರ್‌ ಮಾರ್ಗದ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ವೈದ್ಯಕೀಯ ನೆರವಿಗಾಗಿ ಸ್ಥಳಕ್ಕೆ ರೈಲು ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries