ಕಾಸರಗೋಡು: ಲಾಲ್‍ಬಹಾದ್ದೂರ್ ಶಾಸ್ತ್ರಿ(ಎಲ್‍ಬಿಎಸ್)ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಇಲೆಕ್ಟ್ರಿಷಿಯನ್ ಕಮ್ ಪ್ಲಂಬರ್ ಹುದ್ದೆಗೆ ನೇಮಕಾತಿ ನಡೆಸಲಾಗುವುದು. ವಯಸ್ಸಿನ ಮಿತಿ 18-36 ಆಗಿದ್ದು, ಇಲೆಕ್ಟ್ರಿಷನ್ ಟ್ರೇಡ್ ನಲ್ಲಿ ಜೆ ಟಿ ಎಸ್ ಎಸ್ ಎಲ್ ಸಿ, ಐಟಿಐ, ಕೆಜಿಟಿಇ, ಕೆಜಿಸಿಇ, ಸಿಟಿ ಗಿಲ್ಡ್ ಪರೀಕ್ಷೆ, ವಯರ್ ಮ್ಯಾನ್ ಲೈಸೆನ್ಸ್‍ಗಳಲ್ಲಿ ಯಾವುದಾದರೂ ಒಂದರಲ್ಲಿ ಅರ್ಹತೆಯಿರುವ ಉದ್ಯೋಗಾರ್ಥಿಗಳು ಅಕ್ಟೋಬರ್ 28 ರಂದು ಬೆಳಿಗ್ಗೆ 11ಕ್ಕೆ ಕಾಲೇಜಿನಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಅಭ್ಯರ್ಥಿಗಳು ಅರ್ಹತೆ, ವಯಸ್ಸು ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸುವ ಮೂಲ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9446463953)ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.