HEALTH TIPS

ಸಿರಿಬಾಗಿಲು ಪ್ರತಿಷ್ಠಾನ : ದೇಶಮಂಗಲ ದಿ.ಕೃಷ್ಣ ಕಾರಂತರ ಜನ್ಮ ದಿನಾಚರಣೆ-ಸಂಸ್ಮರಣೆ

 

ಮಧೂರು: ಹಿರಿಯ ವಿದ್ವಾಂಸ ಯಕ್ಷಗಾನ ಅರ್ಥಧಾರಿ ದೇಶಮಂಗಲ ದಿ.ಕೃಷ್ಣ ಕಾರಂತರ ಜನ್ಮದಿನಾಚರಣೆ-ಸಂಸ್ಮರಣಾ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆಯಿತು. ಬೆಳಿಗ್ಗೆ 10: ಕ್ಕೆ ಹರಿದಾಸ ಶೇಣಿ ಪರಂಪರೆಯನ್ನು ಮುಂದುವರಿಸುತ್ತಿರುವ ಬಾಲಮುರಳಿ ಶೇಣಿ ಇವರಿಂದ ಹರಿಕಥಾ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯ ಜ್ಯೋತಿಷಿ  ನಾರಾಯಣ ರಂಗಾಭಟ್ಟ ಮಧೂರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ದೇಶಮಂಗಲ ಕೃಷ್ಣ ಕಾರಂತರು ನಡೆದು ಬಂದ ದಾರಿ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು, ಅವರ ಬರೆಹಗಳ ಸಾಹಿತ್ಯದ ವಿಶೇಷತೆಗಳ ಬಗ್ಗೆ ಸಂಸ್ಕರಣಾ ಭಾಷಣಗೈದರು. ಪ್ರತಿಷ್ಠಾನ ಈ ರೀತಿ ಆಯೋಜಿಸುತ್ತಿರುವುದು ಔಚಿತ್ಯಪೂರ್ಣ ಎಂದರು. ಕೃಷ್ಣ ಕಾರಂತರ ಪುತ್ರ  ಎರಡು ವರ್ಷಗಳ ಹಿಂದೆ ಅಗಲಿದ ದಿ. ಜಯರಾಮ ಕಾರಂತರನ್ನು ಈ ಸಂದರ್ಭದಲ್ಲಿ ನೆನಪಿಸಲಾಯಿತು.


ಈ ಸಂದರ್ಭ ಹಿರಿಯ ಸಾಹಿತಿ, ಅರ್ಥಧಾರಿ, ವೈದ್ಯ ಡಾ.ರಮಾನಂದ ಬನಾರಿ ಅವರನ್ನು ಗೌರವಿಸಲಾಯಿತು. ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈದರು.

ಸಾಧಕರ ಹೆಸರಿನಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ: ಎಡನೀರು ಶ್ರೀಗಳು:

ಗಡಿನಾಡು ಕಾಸರಗೋಡು ಹಲವಾರು ಸಾಧಕರಿಂದಾಗಿ ಬೆಳಗಿಬಂದ ನಾಡು. ಅಂತಹ ಸಾಧಕರಲ್ಲಿ ದೇಶಮಂಗಲ ಕೃಷ್ಣ ಕಾರಂತರು ಒಬ್ಬರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ದೇಶಮಂಗಲ ಕೃಷ್ಣ ಕಾರಂತರ ಜನ್ಮ ದಿನಾಚರಣೆ ಸಂಸ್ಮರಣಾ ಕಾರ್ಯಕ್ರಮದಿಂದ ಹಿಂದಿನ ಸಾಧಕರ ಸಾಧನೆಯ ಕುರಿತಾಗಿ ಇಂದಿನ ಪೀಳಿಗೆಗೆ ಮನದಟ್ಟು ಮಾಡುವ ಪ್ರತಿಷ್ಠಾನದ ಕಾರ್ಯ ಶ್ರೇಷ್ಠವಾದದ್ದು. ಅದರಲ್ಲೂ ಸಾಧಕರ ಹೆಸರಿನಲ್ಲಿ ನಾಡಿನ ಹಿರಿಯ ಸಾಧಕರನ್ನು ಗುರುತಿಸುವುದು ಒಂದು ಒಳ್ಳೆಯ ಪರಂಪರೆ ಎಂದು ದಿವ್ಯ ಉಪಸ್ಥಿತರಿದ್ದ ಶ್ರೀಮದ್.ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.


ಡಾ.ಬನಾರಿಯವರಿಗೆ ವಿಶೇಷ ಗೌರವ ಪುರಸ್ಕಾರ ನೀಡುತ್ತಿರುವುದರಿಂದ ಇಂದಿನ ಜನರಿಗೆ ಅವರೆಲ್ಲರ ಸಾಧನೆಗಳು ಮನವರಿಕೆಯಾಗುವಂತಾಯಿತು. ಪ್ರತಿμÁ್ಠನದ ಯಾವುದೇ ಕಾರ್ಯಕ್ರಮಗಳಿದ್ದರೂ ಬಿಡುವಿನ ವೇಳೆ ಸದಾ ಒಂದು ಭಾಗವಹಿಸುತ್ತೇನೆ ಎಂದು ಎಡನೀರು ಶ್ರೀಗಳು ತಿಳಿಸಿದರು.

ಸಮಾಜದಿಂದ ಪಡೆದುದರ ಒಂದು ನೂಲಿನ ಎಳೆಯಷ್ಟಾದರೂ ಸಮಾಜಕ್ಕೆ ಹಿಂದಿರುಗಿಸಬೇಕು: ಡಾ. ಬನಾರಿ

ದೇಶಮಂಗಲ ಕೃಷ್ಣ ಕಾರಂತರ ಜನ್ಮ ದಿನಾಚರಣೆ ಸಂಸ್ಮರಣಾ  ಕಾರ್ಯಕ್ರಮದ "ವಿಶೇಷ ಗೌರವ ಪುರಸ್ಕಾರವನ್ನು" ಸ್ವೀಕರಿಸಿದ ಡಾ.ರಮಾನಂದ ಬನಾರಿ ಮಾತನಾಡಿ, ಸಮಾಜದಿಂದ ತಾನು ಪಡೆಯುವುದಕ್ಕಿಂತ ಒಂದು ನೂಲಿನ ಎಳೆಯಷ್ಟಾದರೂ  ಸಮಾಜಕ್ಕೆ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಹಿಂದಿನ ಹಿರಿಯರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರವಾದದು. ಆ ಹಿರಿಯರ ಹೆಸರಿನಲ್ಲಿ ನೀಡಿದ ವಿಶೇಷ ಗೌರವ ಸಂತೋಷ ತಂದಿದೆ. ಈ ಪ್ರತಿಷ್ಠಾನ ಮುಂದೆಯೂ ಹೆಚ್ಚು ಬೆಳಗಿ ಬರಲಿ ಎಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ಸುಜೀರ್  ಸುಬ್ರಾಯ  ಸುರತ್ಕಲ್ ಇವರು ಕೋಲಾರ ದಕ್ಷಿಣ ಕನ್ನಡ ಯಕ್ಷಗಾನ ಕಲಾ ವೃಂದ, ಕೋಲಾರ ಚಿನ್ನದ ಗಣಿ ಪ್ರದೇಶ ಇವರು ಉಪಯೋಗಿಸುತ್ತಿದ್ದ ಇನ್ನೂರು ವರ್ಷಗಳ ಹಿಂದಿನ ತೆಂಕುತಿಟ್ಟು ಯಕ್ಷಗಾನದ ಎರಡು ಕಿರೀಟಗಳನ್ನು ಪ್ರತಿಷ್ಠಾನದ ಮ್ಯೂಸಿಯಂಗೆ ಹಸ್ತಾಂತರಿಸಿದರು. ಈ ಕಿರೀಟವು ಹಿಂದಿನ ಕಾಲದಲ್ಲಿ ಗಡಿನಾಡು ಕಾಸರಗೋಡು ಪ್ರದೇಶದ ಯಾವುದೋ ಮೇಳದ ಕಿರೀಟವಾಗಿರಬೇಕು. ಅದು ಈ ಪ್ರತಿಷ್ಠಾನಕ್ಕೆ ಯೋಗ್ಯವೆಂದು ಶ್ರೀಯುತರು ಪೂಜ್ಯ ಸ್ವಾಮಿಗಳ ಆಶೀರ್ವಾದದ ಮೂಲಕ ಪ್ರತಿμÁ್ಠನಕ್ಕೆ ಸಮರ್ಪಿಸಿದರು.


ಸಭೆಯ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಶರ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಭಾಗವತ ಪ್ರಸಂಗಕರ್ತ ದಿ. ಶಿರೂರು ಫಣಿಯಪ್ಪಯ್ಯ  ಅವರ ಪುತ್ರ, ಫಣಿಗಿರಿ ಪ್ರತಿಷ್ಠಾನ, ಬೈಂದೂರು ಇದರ ಅಧ್ಯಕ್ಷ ಉಮೇಶ ಶಿರೂರು ಉಪಸ್ಥಿತರಿದ್ದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರೊ.ಎ. ಶ್ರೀನಾಥ್ ಕಾಸರಗೋಡು, ವಾಸುದೇವ ಕಾರಂತ ಉಜಿರೆಕೆರೆ ಮೊದಲಾದವರು ಉಪಸ್ಥಿತರಿದ್ದರು. 

ಗಣಿತ, ವಿಜ್ಞಾನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ  ಪಿ.ಎಚ್.ಡಿ. ಪದವಿ ಪಡೆದ ಕೃಷ್ಣ ಶುಭಲಕ್ಷ್ಮಿ ಮಹೇಶ ಮಯ್ಯ ಇವರನ್ನು ಅಭಿನಂದಿಸಲಾಯಿತು. ಪ್ರತಿμÁ್ಠನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿ, ಜಗದೀಶ ಕೆ. ಕೂಡ್ಲು ವಂದಿಸಿದರು. ಪ್ರಸನ್ನ ಕಾರಂತ ದೇಶಮಂಗಲ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ ಭೀಷ್ಮವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಮಯ್ಯ ಹಾಲಾಡಿ ಹಿಮ್ಮೇಳದಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಶಶಿ ಆಚಾರ್ಯ ಭಾಗವಹಿಸಿದ್ದರು. ಉಜಿರೆ ಅಶೋಕ್ ಭಟ್(ಭೀಷ್ಮ), ರಾಧಾಕೃಷ್ಣ  ಕಲ್ಚಾರ್(ಸಾಲ್ವ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ(ಅಂಬೆ), ಸರ್ಪಂಗಳ ಈಶ್ವರ ಭಟ್(ಪರಶುರಾಮ), ವೈಕುಂಠ ಹೇರ್ಳೆ(ವೃದ್ದ ಬ್ರಾಹ್ಮಣ)ಪಾತ್ರ ನಿರ್ವಹಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries