ಕಾಸರಗೋಡು: ಪತಿಯ ಅಗಲುವಿಕೆಯಿಂದ ಮನನೊಂದು ಮೈಗೆ ಬೆಂಕಿಹಚ್ಚಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ವಿದ್ಯಾನಗರ ನೆಲ್ಕಳ ಕಾಲನಿ ನಿವಾಸಿ ರಾಘವ-ಲಕ್ಷ್ಮೀ ದಂಪತಿ ಪುತ್ರಿ ಪ್ರಪುಲ್ಲ(55)ಮೃತಪಟ್ಟ ಗೃಹಿಣಿ. ಇವರ ಪತಿ ನರಸಿಂಹ ಆರು ತಿಂಗಳ ಹಿಂದೆ ನಿಧನರಾಗಿದ್ದು, ನಂತರ ಪ್ರಪುಲ್ಲ ಅವರು ಖಿನ್ನತೆಗೊಳಗಾಗಿದ್ದರು. ಸೆ. 16ರಂದು ಮನೆಯಲ್ಲಿ ಮೈಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಇವರನ್ನು ಗಂಭೀರ ಸುಟ್ಟಗಾಐಗಳೊಂದಿಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.