ಬದಿಯಡ್ಕ : ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿರುವ ಕಣ್ಣೂರು ಚಕ್ಕರಕ್ಕಲ್ ನಿವಾಸಿ ಪಿ.ವಿ ರಫೀಕ್ ಎಂಬವರನ್ನು ಅಪಹರಿಸಿ, ಒಂಬತ್ತು ಲಕ್ಷ ರೂ. ನಗದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ನಿವಾಸಿ ಸೇರಿದಂತೆ ಇಬ್ಬರನ್ನು ಚಕ್ಕರಕ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬದಿಯಡ್ಕ ನಿವಾಸಿ ಯು.ಎಸ್ ಮುಸಾಮಿಲ್ ಹಾಗೂ ಕಣ್ಣೂರು ಪೆರುಂದಯಿಲ್ ನಿವಾಸಿ ಎ.ಅಶ್ರಫ್ ಬಂಧಿತರು. ಪ್ರಕರಣದ ಇನ್ನೊಬ್ಬ ಆರೋಪಿ ರಾಮಪುರ ನಿವಾಸಿ ಎನ್. ಶಿಜೋ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿದೆ.
ಸೆ. 5ರಂದು ಬೆಂಗಳೂರಿನಿಂದ ಬಸ್ಸಿನಲ್ಲಿ ಆಗಮಿಸಿ ಕಣ್ಣೂರು ಚಕ್ಕರಕ್ಕಲ್ ಪೀಡಿಗೆಯಲ್ಲಿ ಬಸ್ಸಿಳಿದು ಮನೆಗೆ ತೆರಳುವ ಹಾದಿಮಧ್ಯೆ ಕಾರಿನಲ್ಲಿ ಆಗಮಿಸಿದ ತಂಡ ಇವರನ್ನು ಅಪಹರಿಸಿ ಹಲ್ಲೆ ನಡೆಸಿ, ನಗದು ಮತ್ತು ಮೊಬೈಲ್ ಕಸಿದು, ನಂತರ ಕಾಪಾಡ್ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಕಾರಿಂದ ಹೊರಕ್ಕೆ ತಳ್ಳಿ ಪರಾರಿಯಾಗಿತ್ತು. ಅಪಹರಣಕ್ಕೆ ಬಳಸಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.