ಕಾಸರಗೋಡು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ತನಾರ್ಬುದದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲಯನ್ಸ್ ಇಂಟರ್‍ನ್ಯಾಶನಲ್ 318-ಇ ಆಶ್ರಯದಲ್ಲಿ ಕಾಸರಗೋಡು ನಗರದಲ್ಲಿ'ಪಿಂಕಥಾನ್ ಸ್ತನ ಕ್ಯಾನ್ಸರ್ ಜಾಗೃತಿ ರ್ಯಾಲಿ'ಆಯೋಜಿಸಲಾಯಿತು.
ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಶಿಲ್ಪಾ ಐಪಿಎಸ್ ಅವರು ಧ್ವಜ ಹಸ್ತಾಂತರಿಸುವ ಮೂಲಕ ರ್ಯಾಳಿಗೆ ಚಾಲನೆ ನೀಡಿದರು. ನೂರಾರು ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕಾಸರಗೋಡು ನಗರದ ಟವರ್ ಮುಂಭಾಗದಿಂದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಐಪಿಎಸ್ ಧ್ವಜಾರೋಹಣ ನೆರವೇರಿಸಿದರು. ಲಯನ್ಸ್ ಒಂದನೇ ರೀಜಿಯನ್‍ನ ವಿದ್ಯಾನಗರ, ಕಾಸರಗೋಡು, ಚಂದ್ರಗಿರಿ ಮತ್ತು ಉಪ್ಪಳ-ಮಂಜೇಶ್ವರ ಲಯನ್ಸ್ ಕ್ಲಬ್ ಸದಸ್ಯರ ಹೊರತಾಗಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಸ್ಟೂಡೆಂಟ್ ಪೊಲೀಸ್(ಎಸ್‍ಪಿಸಿ), ಸರ್ಕಾರಿ ಕಾಲೇಜು ಎನ್ನೆಸ್ಸೆಸ್, ಎನ್‍ಸಿಸಿ, ಮಾಲಿಕ್‍ದೀನಾರ್ ನಸಿರ್ಂಗ್ ಕಾಲೇಜು ವಿದ್ಯಾರ್ಥಿಘಳು, ತ್ರಿವೇಣಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಹಳೇ ಬಸ್ ನಿಲ್ದಾಣದ ಮೂಲಕ ಸಾಗಿಬಂದ ರ್ಯಾಲಿ, ವಿಂಟಚ್ ಆಸ್ಪತ್ರೆ ವಠಾರದಲ್ಲಿ ಸಮಾರೋಪಗೊಂಡಿತು.
ಕಣ್ಣೂರು ಮಿಮ್ಸ್ ಆಸ್ಪತ್ರೆಯ ಮಹಿಳಾ ವೈದ್ಯಕೀಯ ತಂಡ ವಿಂಟಚ್ ಸಹಯೋಗದಲ್ಲಿ ಮಹಿಳೆಯರಿಗಾಗಿ ಸ್ತನಾರ್ಬುದದ ಉಚಿತ ತಪಾಸಣೆ ನಡೆಸಲಾಯಿತು. ನಾಲ್ಕು ಜಿಲ್ಲೆಗಳ 30 ಕೇಂದ್ರಗಳಲ್ಲಿ ಲಯನ್ಸ್ 318-ಇ ವತಿಯಿಂದ ಏಕ ಕಾಲಕ್ಕೆ 30ಕೇಂದ್ರಗಳಲ್ಲಿ ರಯಾಲಿ ಆಯೋಜಿಸಲಾಗಿತ್ತು. ಮಹಿಳೆಯರಲ್ಲಿ ಸ್ನಾರ್ಬುದದ ಲಕ್ಷಣಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರ್ಯಾಲಿ ಸಂಯೋಜಕ ಪೆÇ್ರ.ವಿ.ಗೋಪಿನಾಥನ್, ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಕೆ.ಸುಕುಮಾರನ್ ನಾಯರ್, ಪ್ರಾದೇಶಿಕ ಸಮಿತಿ ಅಧ್ಯಕ್ಷ ಪಿ.ವಿ.ಮಧುಸೂದನನ್, ಚಂದ್ರಗಿರಿ ಲಯನ್ಸ್ ಕ್ಲಬ್‍ನ ಜಲೀಲ್, ಮುಸ್ತಫಾ, ಜಿಲ್ಲಾಕ್ಯಾಬಿನೆಟ್ ಕಾರ್ಯದರ್ಶಿ ವಕೀಲ ವಿನೋದಕುಮಾರ್, ಮಂಜುನಾಥ್ ಕಾಮತ್ ಎಂ.ಎ.ನಾಸರ್, ರಾಜೇಂದ್ರ ಕುಂಟಾರ್, ಫಾರೂಕ್ ಕಾಸ್ಮಿ ಮೊದಲಾದವರು ಉಪಸ್ಥಿತರಿದ್ದರು.