ಕಾಸರಗೋಡು: ಗೃಹಿಣಿಯ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಫ್ತಿಯ ಆಲಂಪಾಡಿ ನಿವಾಸಿ ರಿಯಾಸ್ ಯಾನೆ ಪಟ್ಟುರುಮಾಲ್ ರಿಯಾಸ್‍ನನ್ನು ಚಿತ್ತಾರಿಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೃಹಿಣಿ ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ.
ಗಾಯಕಿಯಾಗಿರುವ ಗೃಹಿಣಿ ಹಾಗೂ ರಿಯಾಸ್ ಮದುವೆ ಸಮಾರಂಭಗಳಲ್ಲಿ ಗಾನಮೇಳ ಕಾರ್ಯಕ್ರಮ ನೀಡುತ್ತಿದ್ದು, ಈ ರೀತಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ರಿಯಾಸ್ ತನ್ನ ಮಾನಭಂಗ ನಡೆಸಿದ್ದು, ಈ ವಿಷಯ ಬಹಿರಂಗಪಡಿಸದೆ ಇರಬೇಕಾದರೆ ಹಣ ನೀಡುವಂತೆ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.