ಆಲಪ್ಪುಳ: ಮಹಿಳಾ ವೈದ್ಯೆಗೆ ಯುವಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ನೀಡಲಾಗಿದೆ. ಕಳವೂರಿನಲ್ಲಿ ಘಟನೆ ನಡೆದಿದೆ. ಮನೆಯ ಅಡುಗೆ ಕೊಠಡಿಯಲ್ಲಿ ಯುವಕ ವೈದ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ದೂರಿನ ಮೇರೆಗೆ ಪೋಲೀಸರು ಅಪುರ ಮೂಲದ ಸುನೀಲ್ ನನ್ನು ವಶಕ್ಕೆ ಪಡೆದಿದ್ದಾರೆ.
ವಿರೋಧಿಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ವೈದ್ಯರು ದೂರು ನೀಡಿದ್ದಾರೆ