ಬದಿಯಡ್ಕ: ಕೇರಳದ ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಸೆಲ್ಫ್ ಡ್ರಾಯಿಂಗ್ ಮತ್ತು ಡಿಸ್ಬಸಿರ್ಂಗ್ ಆಫೀಸರ್ ಪದವಿಯನ್ನು ಕಿತ್ತೆಸೆದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಕೆ. ಪಿ.ಎಸ್. ಟಿ..ಎ. ರಾಜ್ಯಮಟ್ಟದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ಕುಂಬಳೆ ಬದಿಯಡ್ಕದಲ್ಲಿರುವ ಉಪಜಿಲ್ಲಾ ವಿದ್ಯಾಭ್ಯಾಸ ಕಚೇರಿಯ ಮುಂದೆ ಗುರುವಾರ ನಡೆಸಿದ ಧರಣಿಯನ್ನು ಕೆ.ಪಿ.ಎಸ್.ಟಿ.ಎ. ರಾಜ್ಯ ನಿರ್ವಾಹಕ ಸಮಿತಿ ಸದಸ್ಯ ಪ್ರಶಾಂತ್ ಕಾನತ್ತೂರ್ ಉದ್ಘಾಟಿಸಿದರು.
ರಾಜ್ಯ ಸಮಿತಿ ಸದಸ್ಯ ಯೂಸಫ್ ಕೊಟ್ಯಾಡಿ, ರಾಜ್ಯ ಭಾಷಾ ಅಲ್ಪಸಂಖ್ಯಾತ ಸಮಿತಿ ಸದಸ್ಯೆ ಜಲಜಾಕ್ಷಿ, ಪಿ. ಗೋಪಾಲಕೃಷ್ಣನ್, ಕೆ . ಮಲ್ಲಿಕಾ, ಪಿ. ವಿ. ಶರತ್ ಚಂದ್ರ ಶೆಟ್ಟಿ, ಬೇಬಿ ಸವಿತಾ, ಶ್ರೀವಿದ್ಯಾ ಕಿಳಿಂಗಾರ್, ಎ.ರಾಧಾಕೃಷ್ಣನ್, ಶಶಿಧರ ಪೈಕ, ಎ.ಸಿ ವಿನೋದ್, ನಿರಂಜನ್ ರೈ, ಶಂಸೀನ ಪಿ.ಎ ಮುಂತಾದವರು ಮಾತನಾಡಿದರು. ಉಪಜಿಲ್ಲಾ ಅಧ್ಯಕ್ಷ ರಾಮಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ್ ಕ್ರಾಸ್ತಾ ಸ್ವಾಗತಿಸಿ, ಕೋಶಾಧಿಕಾರಿ ಲತೀಶ್ ಕುಮಾರ್ ವಂದಿಸಿದರು.